Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದರಿದ್ರ ಸಮಾಜ: ಆಂದೋಲನ ಓದುಗರ ಪತ್ರ

ದರಿದ್ರ ಸಮಾಜ

ಇಂದಿನ ಸಮಾಜದಲ್ಲಿ
ಒಳ್ಳೆಯ ಮನಸ್ಸುಗಳಿಗೆ ಬೆಲೆಯಿಲ್ಲ
ಸುಳ್ಳಾಡುವವರನ್ನು ನಂಬಿಸಿ ವಂಚಿಸುವವರನ್ನು
ಸಮಾಜ ಒಪ್ಪಿಕೊಂಡು ಅಪ್ಪಿಕೊಂಡಿದೆ

ನಿಯತ್ತಾಗಿ ಕೆಲಸ ಮಾಡಿದವರನ್ನು
ಜಾಡಿಸಿ ಒದೆಯುತ್ತಿದೆ
ಅನ್ಯಾಯ ಮಾಡಿದವರನ್ನು
ಈ ಸಮಾಜ ಕೈ ಹಿಡಿದುಕೊಂಡಿದೆ

ಬುದ್ಧಿ ಹೇಳಿ ತಿದ್ದುವರನ್ನು
ತಪ್ಪೆಂದು ಹೇಳಿ ಬಾಯಿ ಮುಚ್ಚಿಸಿ ದೂರ ನೂಕಿದೆ
ಬಣ್ಣ ಬಣ್ಣದ ಮಾತನಾಡುವವರನ್ನು
ಬಾ ಎಂದು ಕರೆದು ಆಶ್ರಯ ಕೊಟ್ಟು ವಿಶ್ರಾಂತಿ ನೀಡಿದೆ

ಎಲ್ಲಿದೆ ನ್ಯಾಯ? ಯಾರಲ್ಲಿದೆ ಮಾನವೀಯತೆ?
ಹೇಳಿದಂತೆ ಕೇಳಿದವರಿಗೆ ಸಲ್ಮಾನ
ಸತ್ಯದ ಪರ ನಿಂತವರಿಗೆ ಅವಮಾನ
ಬಾಯಿ ಮಾತಿಗೆ ನೀ ಒಳ್ಳೆವ ಎನ್ನುವ ಈ ಸಮಾಜ
ಕೊನೆಗೆ ದುರ್ಜನರಿಗೆ ನೀಡುವುದು ಬಹುಮಾನ

– ಹೊಂಗನೂರು ಮಂಜುನಾಥ್

Tags: