Mysore
21
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಮೈಸೂರು: ವಿಷಾನಿಲ ಸೋರಿಕೆ 30 ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ

ಮೈಸೂರು:ಶುಕ್ರವಾರ ಸಂಜೆ(ಜೂ. 7)  ಗುಜರಿ ಗೋಡೌನ್‌ನಲ್ಲಿ ಕ್ಲೋರಿನ್‌ ಮತ್ತು ಅಮೋನಿಯಂ ಎಂಬ ವಿಷಾನಿಲ ಸೋರಿಕೆಯಾಗಿದೆ, ಪರಿಣಾಮ ಸುತ್ತಮುತ್ತಲಿನ ಜನರಿಗೆ ಕೆಮ್ಮು, ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಜರಿಯಲ್ಲಿದ್ದ ಐವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಘಟನೆಯ ವಿವರ:
ಹಳೆ ಕೆಸರೆ ಬಳಿ ಇರುವ ಮೆಹಬೂಬ್‌ ಎಂಬುವವರಿಗೆ ಸೇರಿದ ಗುಜರಿ ಅಂಗಡಿಯೊಂದರಲ್ಲಿ ಸಾಮಾನುಗಳನ್ನು ತೆರುವು ಮಾಡುವಾಗ ಕ್ಲೋರಿನ್‌ ಮತ್ತು ಅಮೋನಿಯಂ ಇದ್ದ ಸಿಲಿಂಡರ್‌ಗಳನ್ನು ಖಾಲಿ ಎಂದು ತಿಳಿದು ಕಾರ್ಮಿಕರು ತೆರವು ಮಾಡಿದಾಗ ಅದರಲ್ಲಿದ್ದ ವಿಷನಿಲ ಸೋರಿಕೆಯಾಗಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಅಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಮತ್ತಷ್ಟು ವಿಷನೀಲ ಸೋರಿಕೆಯಾಗಿ ಗಾಳಿಯಲ್ಲಿ ಹರಡಿದ್ದರಿಂದ ಅಕ್ಕಪಕ್ಕದ ಅಂಗಡಿಗಳ ಕಾರ್ಮಿಕರಿಗೂ ಉಸಿರಾಟದಲ್ಲಿ ತೊಂದರೆಯಾದ ಕಾರಣ ಅವರನ್ನೂ ಕೂಡ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

 

 

Tags:
error: Content is protected !!