Mysore
24
clear sky

Social Media

ಭಾನುವಾರ, 01 ಮಾರ್ಚ್ 2026
Light
Dark

ಸಾಮಾಜಿಕ ಜಾಲತಾಣದಲ್ಲಿ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್;‌ ಅಸಲಿಯತ್ತೇನು?

ಚಿಕ್ಕಬಳ್ಳಾಪುರ: ಮೊನ್ನೆಯಷ್ಟೇ (ಜೂನ್‌ 4) ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದುಕೊಂಡಿತು. ರಾಜ್ಯದಲ್ಲಿ ಬಿಜೆಪಿ 17, ಜೆಡಿಎಸ್‌ 2 ಮತ್ತು ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವು.

ಫಲಿತಾಂಶ ಹೊರಬಿದ್ದ ಬಳಿಕ ಶಾಸಕ ಪ್ರದೀಪ್‌ ಈಶ್ವರ್‌ ಚಿಕ್ಕಬಳ್ಳಾಪುರ ಕ್ಷೇತ್ರದ ಫಲಿತಾಂಶದ ಕುರಿತು ತಾವು ನೀಡಿದ್ದ ಹೇಳಿಕೆಯಿಂದಾಗಿ ತೀವ್ರ ಟ್ರೋಲ್‌ಗೆ ಒಳಗಾದರು. ಚುನಾವಣೆಗೂ ಮುನ್ನ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್‌ ಕಾಂಗ್ರೆಸ್‌ ಅಭ್ಯರ್ಥಿಗಿಂತ ಕೇವಲ ಒಂದು ಮತ ಹೆಚ್ಚು ಲೀಡ್‌ ಪಡೆದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಟ್ರೋಲ್‌ ಆಗಿದ್ದು ಮಾತ್ರವಲ್ಲದೇ ಪ್ರದೀಪ್‌ ಈಶ್ವರ್‌ ಕೊಟ್ಟ ಮಾತಿನಂತೆ ರಾಜೀನಾಮೆ ಪತ್ರ ಬರೆದಿದ್ದಾರೆ ಎಂದು ಪತ್ರವೊಂದೂ ಸಹ ವೈರಲ್‌ ಆಯಿತು. ಆದರೆ ಅಸಲಿಯತ್ತೇನೆಂದರೆ ಈ ಪತ್ರ ನಕಲಿಯಾಗಿದೆ. ಈ ಬಗ್ಗೆ ಸ್ವತಃ ಪ್ರದೀಪ್‌ ಈಶ್ವರ್‌ ಸಹ ಪ್ರತಿಕ್ರಿಯಿಸಿದ್ದು, ಇದೊಂದು ನಕಲಿ ಪತ್ರ, ಆ ಪತ್ರಕ್ಕೂ ನನಗೂ ಸಂಬಂಧವಿಲ್ಲ, ಕಿಡಿಗೇಡಿಗಳು ನಕಲಿ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ, ಈ ಬಗ್ಗೆ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

Tags:
error: Content is protected !!