Mysore
26
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಜೂ.7 ರಂದು ಮೈಸೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಮೈಸೂರು: ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ ಇಲವಾಲ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬೋಗಾದಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಜೂ. 07 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇಲವಾಲ ವಿದ್ಯುತ್ ವಿತರಣಾಕೇಂದ್ರದ ವ್ಯಾಪ್ತಿಯ ಪ್ರದೇಶಗಳು:

ಇಲವಾಲ, ಹಳೆ-ಕಾಮನಕೊಪ್ಪಲು, ಮೈದನಹಳ್ಳಿ, ಮೇಗಳಾಪುರ, ಭದ್ರೇಗೌಡನಕೊಪ್ಪಲು, ಚಿಕ್ಕೆಗೌಡನಕೊಪ್ಪಲು, ಹೊಸಕೋಟೆ, ಸರಕಟ್ಟೆ, ಯಾಚೇಗೌಡನಹಳ್ಳಿ, ದಡಕನಹಳ್ಳಿ, ರಾಮೇನಹಳ್ಳಿ, ಯಡಹಳ್ಳಿ, ಕಲ್ಲೂರು, ನಾಗನಹಳ್ಳಿ, ಗುಂಗ್ರಾಲ್‌ಛತ್ರ, ಛತ್ರದಕೊಪ್ಪಲು, ರಟ್ನಳ್ಳಿ, ವೀರಪ್ಪನಕೊಪ್ಪಲು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಬೋಗಾದಿ ವಿದ್ಯುತ್ ವಿತರಣಾಕೇಂದ್ರದ ವ್ಯಾಪ್ತಿಯ ಪ್ರದೇಶಗಳು:

ಜನತಾನಗರ, ಬೋಗಾದಿ 2ನೇ ಹಂತ ನಾರ್ತ್ ಮತ್ತು ಸೌತ್, ಗಂಗೋತ್ರಿಕ್ಯಾoಪಸ್, ಗಂಗೋತ್ರಿಕ್ವಾಟ್ರಸ್, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ರೂಪನಗರ, ದೀಪಾನಗರ, ಬೋಗಾದಿ ಗ್ರಾಮ, ಪ್ರೀತಿ ಲೇಔಟ್, ಆರ್.ಎಂ.ಪಿ ಲೇಔಟ್, ವಿಜಯನಗರ 3ನೇ ಹಂತ, ಹಿನಕಲ್, ವಿಜಯನಗರ 4ನೇ ಹಂತ, ವಿಜಯಶ್ರೀಪುರ, ಸುಧಾ ಲೇಔಟ್, ರೈಲ್ವೆ ಲೇಔಟ್, ಎಸ್.ಬಿ.ಎಂ ಲೇಔಟ್, ವಾಗ್ದೇವಿನಗರ, ಸಿ.ಎಫ್.ಟಿ.ಆರ್.ಐ ಲೇಔಟ್, ಯುನಿವರ್ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ವಿ.ವಿ ಮೊಹಲ್ಲಾ ವಿಭಾಗದ, ಕಾರ್ಯನಿರ್ವಾಹಕಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags:
error: Content is protected !!