Mysore
20
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಅತ್ತಿಗೆಯೊಂದಿಗಿನ ಅನೈತಿಕ ಸಂಬಂಧಕ್ಕಾಗಿ ಅಣ್ಣನನ್ನೇ ಕೊಂದ ತಮ್ಮ!

ಚಾಮರಾಜನಗರ: ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಅಣ್ಣನಿಗೆ ಗೊತ್ತಾಗಿದೆ ಎಂದು ತಿಳಿದ ತಮ್ಮ, ಅತ್ತಿಗೆಗಾಗಿ ಅಣ್ಣನನ್ನೇ ಕೊಂದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿಂದು (ಜೂನ್‌.2) ನಡೆದಿದೆ.

45 ವರ್ಷದ ಪ್ರಸಾದ್‌ ಎಂಬುವವರೇ ತಮ್ಮ ಸಹೋದರನಿಂದ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಕುಮಾರ್‌ (39 ವರ್ಷ) ಕೊಲೆ ಮಾಡಿದ ಪಾಪಿಯಾಗಿದ್ದಾನೆ.

ತನ್ನ ಹೆಂಡತಿಯೊಂದಿಗೆ ಕುಮಾರ್‌ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪ್ರಸಾದ್‌, ಕುಮಾರ್‌ ಜತೆ ಜಗಳವಾಡಿದ್ದಾನೆ. ಜಗಳ ಅತಿರೇಕಕ್ಕೆ ತಲುಪಿ ಇಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಸಿಟ್ಟಿಗೆದ್ದ ಕುಮಾರ್‌ ಅಣ್ಣನಿಗೆ ಚಾಕುವಿನಿಂದ ಇರಿದಿದ್ದಾನೆ.

ತೀವ್ರ ರಕ್ತಸ್ರಾವದಿಂದ ಪ್ರಸಾದ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನಾ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ.

Tags:
error: Content is protected !!