Mysore
23
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಬಿಜೆಪಿಗೆ ಎಕ್ಸಿಟ್‌ ಪೋಲ್‌ಗಿಂತ ಉತ್ತಮ ಫಲಿತಾಂಶ ಬರಲಿದೆ: ಜೋಶಿ

ಬೆಳಗಾವಿ: ಲೋಕಸಭಾ ಚುನಾವಣೆ ಸಂಬಂಧ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿಯುತ್ತಿವೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಗೆ ಬಹುಮತ ಬರಲಿದೆ ಎಂದು ಹೇಳುತ್ತಿವೆ. ಈ ಬಗ್ಗೆ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್‌ ಪೋಲ್‌ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ  ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಕ್ಸಿಟ್‌ ಪೋಲ್‌ ಸರಾಸರಿ ತೆಗೆದ್ರೂ 350-370 ಸ್ಥಾನ ಬರಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ಇದು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇನ್ನೂ  ರಾಜ್ಯ ಕಾಂಗ್ರೆಸ್‌ನಲ್ಲಿ ಕುಟುಂಸ್ಥರಿಗೆ ಟಿಕೆಟ್‌ ನೀಡಿದ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್‌ ಸಾಮಾನ್ಯವಾಗಿ ಫ್ಯಾಮಿಲಿ ರನ್‌ ಪಾರ್ಟಿ. ಬಿಜೆಪಿಯಲ್ಲಿ ಈ ಪದ್ಧತಿ ಇಲ್ಲ. ಬಿಜೆಪಿಯಲ್ಲ ಕೆಲಸ ಮಾಡಿದರೆ ಸ್ವತಃ ಬಲದ ಮೇಲೆ ಬರಬಹುದು. ಆದರೆ ಕಾಂಗ್ರೆಸ್‌, ಸಮಾಜವಾದಿ, ಆರ್‌ಜೆಡಿ ಪಕ್ಷದಲ್ಲಿ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!