Mysore
23
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮೋದಿ‌ ಧ್ಯಾನಕ್ಕಿಂತ ಪ್ರಾಯಶ್ಚಿತ್ತಕ್ಕಾಗಿ ಕನ್ಯಾಕುಮಾರಿಗೆ ಹೋಗುವುದು ಒಳ್ಳೆಯದು; ಕಪಿಲ್‌ ಸಿಬಲ್

ಚಂಡಿಗಢ: ಪ್ರಸ್ತುತ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೇ.30ರ ಸಂಜೆಯಿಂದ ಜೂನ್‌ 1 ರ ಸಂಜೆಯರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕನಾಂದ ಸ್ಮಾರಕದಲ್ಲಿ ಎರಡು ದಿನಗಳ ವಾಸ್ತವ್ಯ ಹೂಡಲಿದ್ದಾರೆ. ಜತೆಗೆ ಮೇ.31 ರಂದು ವಿವೇಕಾನಂದ ಸ್ಮಾರಕದ ಧ್ಯಾನಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ. ಈ ಬಗ್ಗೆ  ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ವ್ಯಂಗವಾಡಿದ್ದಾರೆ.

ವಿವೇಕದ ಅರ್ಥ ಗೊತ್ತಿಲ್ಲದ ಮೋದಿ ಅವರು ವಿವೇಕನಂದಾ ಸ್ಮಾರಕದಲ್ಲಿ ಯಾವ ಧ್ಯಾನ ಮಾಡುವರು. ಮೋದಿ ಅವರು ಧ್ಯಾನಕ್ಕಿಂತ ಪ್ರಾಯಶ್ಚಿತ್ತಕ್ಕಾಗಿ ಕನ್ಯಾಕುಮಾರಿಗೆ ಹೋಗುವುದು ಒಳ್ಳೆಯದು ಅಥವಾ ಸ್ವಾಮಿ ವಿವೇಕನಂದರ ಬರಹ ಮತ್ತು ಭಾಷಣಗಳಿಂದ ಸ್ಫೂರ್ತಿ ಪಡೆಯಲು ಹೊರಟರೆ ಒಳ್ಳೆಯದು ಎಂದು ಕಪಿಲ್‌ ಸಿಬಲ್‌ ಲೇವಡಿ ಮಾಡಿದ್ದಾರೆ.

ಕಳೆದ ೧೦ ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ. ಮೋದಿ ತಮ್ಮ ಭಾಷಣದಲ್ಲಿ ಸಾಧನೆ ಬಗ್ಗೆ ಏನಾದರೂ ಹೇಳಿದ್ದಾರಾ? ಮೋದಿ ಕೊಟ್ಟ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದರು.

ತಮ್ಮ ಭಾಷಣದಲ್ಲಿ ನವ ಭಾರತ ನಿರ್ಮಾಣ ಮಾಡುವುದಾಗಿ ಹೇಳಿರುವ ಮೋದಿ, ಅಧಿಕಾರಕ್ಕೆ ಬಂದ ೧೦ ವರ್ಷದಲ್ಲಿ ಯಾವ ನವ ಭಾರತ ನಿರ್ಮಾಣ ಮಾಡಿದ್ದಾರೆ? ಮೋದಿ ಸಾಧನೆ ಶೂನ್ಯ, ಅವರು ಏನಾದರೂ ಸಾಧನೆ ಮಾಡಿದ್ದರೆ ಮಂಗಳಸೂತ್ರ, ಮುಜ್ರಾ, ವೋಟ್‌ಬ್ಯಾಂಕ್‌ ರಾಜಕೀಯ, ವೋಟ್‌ ಜಿಹಾದ್‌ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಕಪಿಲ್‌ ಸಿಬಲ್‌ ಕುಟುಕಿದರು.

Tags: