Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ

ಮಂಡ್ಯ: ಕಳೆದ 24ರ ಶುಕ್ರವಾರ ರಾತ್ರಿ ಶ್ರೀರಂಗಪಟ್ಟಣ ತಾಲ್ಲೂಕು ಕೆ.ಆರ್.ಸಾಗರದ ಸಂತೆಮಾಳದ ಮುಖ್ಯ ರಸ್ತೆಯಲ್ಲಿ ನಾಯಿ ಅಡ್ಡ ಬಂದು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹುಲಿಕರೆ ಗ್ರಾಮದ ರವಿಚಂದ್ರ (29) ಚಿಕಿತ್ಸೆ ಫಲಕಾರಿಯಾಗದೆ ಇಂದು ( ಮೇ 28 ) ಬೆಳಗ್ಗೆ ನಿಧನ ಹೊಂದಿದ್ದಾರೆ.

ರವಿಚಂದ್ರ ಕೆ.ಆರ್.ಸಾಗರ ಸಮೀಪದ ಹುಲಿಕರೆ ಗ್ರಾಮದಲ್ಲಿ ವಾಸವಾಗಿದ್ದು ಸಲೂನ್ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಕೆ.ಆರ್.ಸಾಗರದಲ್ಲಿನ ಅಂಗಡಿಗೆ ಹೋಗಿ ವಾಪಸ್ಸ್ ಹುಲಿಕರೆಯ ತಮ್ಮ ನಿವಾಸಕ್ಕೆ ಬರುವಾಗಿ ನಾಯಿಯೊಂದು ಬೈಕ್‌ಗೆ ಅಡ್ಡಬಂದು ಅಪಘಾತವಾಗಿತ್ತು. ಬಳಿಕ ಆತನನ್ನು ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆತರ್ವ ಆರ್‌.ವಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರವಿಚಂದ್ರ ದೇಹ ನಿಷ್ಕ್ರಿಯಗೊಂಡ ಕಾರಣ ಮೃತನ ಪತ್ನಿ ರಂಜಿತ ತನ್ನ ಪತಿ ದೇಹದ ಅಂಗಾಗಳು ಇತರೆ ಜನರಿಗೆ ಸಹಾಯವಾಗಲಿ ಎಂದು ಮಾನವೀಯತೆ ಮೆರೆದು ರವಿಚಂದ್ರ ಕಿಡ್ನಿ, ಚರ್ಮ, ಹೃದಯ ಸೇರಿ ದೇಹದ ಹಲವು ಭಾಗಗಳನ್ನು ದಾನ ನೀಡಿದ್ದಾರೆ.

ಕೆ.ಆರ್.ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ ರಂಜಿತ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಬನ್ನೂರಿನಲ್ಲಿ ನಡೆಯಿತು.

Tags: