Mysore
18
broken clouds

Social Media

ಭಾನುವಾರ, 11 ಜನವರಿ 2026
Light
Dark

ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂ ಮೊರೆ ಹೋದ ಕೇಜ್ರಿವಾಲ್‌!

ನವದೆಹಲಿ: ದೆಹಲಿಯ ಮದ್ಯನೀತಿ ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೇಜ್ರಿವಾಲ್‌, ತಮಗೆ ಗಂಭೀರ ಕಾಯಿಲೆಯಿದ್ದು, ಸಿಟಿ ಸ್ಕ್ಯಾನ್‌, ಪಿಇಟಿ ಮಾಡಿಸಬೇಕಾದ ಅವಶ್ಯಕತೆಯಿರುವುದರಿಂದ ಮುಂದಿನ 7 ದಿನಗಳ ಕಾಲ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ಮನವಿ ಮಾಡಿದ್ದಾರೆ. ಅವರ ಮಧ್ಯಂತರ ಜಾಮೀನು ಅವಧಿ ಜೂನ್‌.1 ವರೆಗೆ ಇದ್ದು, ಬಳಿಕ ಅವರು ತಿಹಾರ್‌ ಜೈಲಿಗೆ ಹೋಗಬೇಕಿದೆ. ಹೀಗಾಗಿ ಅವರು ತಮ್ಮ ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Tags:
error: Content is protected !!