Mysore
20
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ, ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ

ಮೈಸೂರು: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ವಿಜಯನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಐವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ವಿಜಯನಗರದಲ್ಲಿರುವ ರಾಯಲ್ ಈಶಾ ಎಂಬ ಮಸಾಜ್ ಪಾರ್ಲರ್ ಮೇಲೆ ಇಂದು(ಮೇ.25) ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಓರ್ವ ಹುಡುಗಿ ಮಡಿಕೇರಿ ಮೂಲದವಳು. ಇನ್ನುಳಿದ ಇಬ್ಬರು ಮಹಿಳೆಯರು ಸ್ಥಳೀಯವರಾಗಿದ್ದಾರೆ. ಈ ದಾಳಿಯಲ್ಲಿ ಓರ್ವ ಮಹಿಳೆ ದಂಧೆ ಕೋರಳು, ಒಬ್ಬ ಪಿಂಪ್ ಹಾಗೂ ಇಬ್ಬರು ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಕಲೆಹಾಕಿ ಸಹಾಯಕ ಪೊಲೀಸ್ ಆಯುಕ್ತರಾದ ಗಜೇಂದ್ರ ಪ್ರಸಾದ್‌ ಅವರಿಗೆ ದೂರು ನೀಡಿತ್ತು.

ವಿಜಯನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಪ್ರದೀಪ್ ರವರ ನೇತೃತ್ವದಲ್ಲಿ ಮಸಾಜ್ ಪಾರ್ಲರ್ ನ ಮೇಲೆ ದಾಳಿ ನಡೆಸಲಾಯಿತು. ದಾಳಿಯ ವೇಳೆ ಪೊಲೀಸ್ ಸಿಬ್ಬಂದಿಗಳು, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು ಹಾಗೂ ಒಡನಾಡಿ ಸಂಸ್ಥೆ ಸಿಬ್ಬಂದಿಗಳಾದ ಪ್ರದೀಪ್.ಕೆ, ಸುಮಾ, ಶಶಾಂಕ್ ಹಾಗೂ ಬಾಲುಕುಮಾರ್ ಇದ್ದರು.

Tags:
error: Content is protected !!