ನವದೆಹಲಿ: ಭಾರತ ತಂಡದ ಫುಟ್ಬಾಲ್ ತಾರೆ ಸುನಿಲ್ ಚೆಟ್ರಿ ಅವರು ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6ರಂದು ಕುವೈತ್ ತಂಡದ ವಿರುದ್ಧ ನಡೆಯಲಿರುವ ಫೀಫಾ ಅರ್ಹತಾ ಪಂದ್ಯದ ನಂತರ ಅವರು ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಹೊಂದಲಿದ್ದಾರೆ.
ಇನ್ನು ಈ ಬಗ್ಗೆ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತಾವು ನಿವೃತ್ತಿ ಹೊಂದುವ ಬಗ್ಗೆ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಭಾರತ ಪರವಾಗಿ ಇಷ್ಟು ವರ್ಷಗಳ ಕಾಲ ಆಡಿರುವುದು ಸ್ಮರಣೀಯ ಎಂದು ಅವರು ಅದರಲ್ಲಿ ಹೇಳಿದ್ದಾರೆ.
ಇನ್ನು ಚೆಟ್ರಿ ಅವರ ಈ ಪೋಸ್ಟ್‌ಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಮೆಂಟ್ ಮಾಡಿದ್ದಾರೆ. ಹೌದು, ವಿರಾಟ್ ಕೊಹ್ಲಿ ಅವರು ಸುನಿಲ್ ಚೆಟ್ರಿ ಟ್ವೀಟ್ಗೆ ಕಮೆಂಟ್ ಮಾಡಿದ್ದಾರೆ. ಕಮೆಂಟ್‌ನಲ್ಲಿ ʼಮೈ ಬ್ರದರ್ ಪ್ರೌಡ್ʼ (My brother. PROUD) ಎಂದು ಬರೆದಿದ್ದು, ಜೊತೆಯಲ್ಲಿ ಹಾರ್ಟ್ ಎಮೋಜಿ ಒಂದನ್ನು ಹಂಚಿಕೊಂಡಿದ್ದಾರೆ.
ಸುನಿಲ್ ಚೆಟ್ರಿ ಬೆಂಗಳೂರು ಫುಟ್ಬಾಲ್ ತಂಡದ ನಾಯಕರೂ ಆಗಿದ್ದವರು. ಅವಾಗಿನಿಂದಲೂ ವಿರಾಟ್ ಕೊಹ್ಲಿ ಮತ್ತು ಚೆಟ್ರಿ ಪರಸ್ಪರ ಗೆಳೆಯರಾಗಿದ್ದರು. ಆರ್‌ಸಿಬಿ ಚೆಟ್ರಿ ಅವರಿಗೆ ವಿಶೇಷ ಜೆರ್ಸಿ ಕೂಡಾ ನೀಡಿತ್ತು. ಚೆಟ್ರಿ ಜೊತೆಗೆ ಆರ್‌ಸಿಬಿ ವಿಶೇಷ ಬಾಂಧವ್ಯ ಹೊಂದಿದ್ದು, ಅವರು ಆರಂಭದಿಂದಲೂ ಆರ್‌ಸಿಬಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.
ಇನ್ನು ಸುನಿಲ್ ಚೆಟ್ರಿ ಅವರ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದು, ಸದ್ಯ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.