Mysore
22
haze

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಜಾಮೀನು ಸಿಕ್ಕರೂ ಬಿಡುಗಡೆಯಾಗದ ರೇವಣ್ಣ !

ಬೆಂಗಳೂರು : ಹಾಸನ ಮಹಿಳೆಯ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

ಹಾಸನದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಎಯ ಅಪಹರಣಕ್ಕೆ ಸಂಬಂಧಿಸಿದಂಸಂತಸತೆ ನೀಡಿದ್ದ ದೂರಿನ ಮೇರೆಗೆ ಹೆಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ತಂಡ ಬಂಧಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಬಂಧನದಿಂದ ಮುಕ್ತಿ ಪಡೆಯಲು ಜಾಮೀನಿಗಾಗಿ ರೇವಣ್ಣ ಅವರು ತುಂಬ ಪ್ರಯತ್ನ ಪಟ್ಟಿದ್ದರೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿರಲಿಲ್ಲ.

ಆದರೆ ಇಂದು ನ್ಯಾಯಾಲಯ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆದರೆ ಜಾಮೀನಿನ ಆದೇಶ ನೀಡುವಷ್ಟರಲ್ಲಿ ನ್ಯಾಯಾಲಯದ ಸಮಯ ಮುಗಿದ ಕಾರಣ ಜಾಮೀನಿನ ಪ್ರತಿ ನಾಳೆ ರೇವಣ್ಣ ಅವರ ವಕೀಲರ ಕೈ ಸೇರಲಿದೆ.

ಹೀಗಾಗಿ ನಾಳೆ ಜಾಮಿನು ಪ್ರತಿ ಸಿಕ್ಕ ಬಳಿಕ ಅದನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸಲ್ಲಿಸಿದ ಬಳಿಕ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಗುವುದಾಗಿ ರೇವಣ್ಣ ಆಪ್ತವಲಯ ತಿಳಿಸಿದೆ.

Tags:
error: Content is protected !!