Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಮೋದಿ ಯಾವುದೇ ಮೈತ್ರಿ ಪಕ್ಷವನ್ನು ಕಡೆಗಣಿಸುವುದಿಲ್ಲ: ಜಿಟಿ ದೇವೇಗೌಡ

ಮೈಸೂರು: ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣ ಹಾಗೂ ಸಂತ್ರಸ್ತ ಮಹಿಳಾ ಅಪಹರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಜತೆ ಎನ್‌ಡಿಎ ಮೈತ್ರಿ ಅಂತರ ಕಾಯ್ದುಕೊಂಡಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯನ್ನು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ನಿರಾಕರಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದೇಶವನ್ನಾಳುತ್ತಿರುವ ಮೋದಿ ಹಾಗೂ ಅಮಿತ್‌ ಶಾ ಅವರು ತಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವವರನ್ನು ಯಾವತ್ತು ಕೈ ಬಿಟ್ಟಿಲ್ಲ. ಎನ್‌ಡಿಯ ಮೈತ್ರಿ ಮುರಿದು ಹೋದ ನಿತೀಶ್‌ ಕುಮಾರ್‌ ಅವರನ್ನೇ ಮತ್ತೆ ಬಂದ ಮೇಲೆ ಸಿಎಂ ಮಾಡಿದ್ದಾರೆ ಎಂದರು.

ನಾವು ಪ್ರಜ್ವಲ್‌ ಅವರ ಕೆಲಸವನ್ನು ಸಮರ್ಥಿಸಿಕೊಂಡಿದ್ದರೇ ಅವರು ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನಾವು ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಬೇಕು ಎಂಬ ನಿಲುವನ್ನು ಹೊಂದಿದ್ದೇವೆ. ಹಾಗಾಗಿ ಇದು ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದರು.

Tags:
error: Content is protected !!