Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

SSLC Results 2024: ಕಳೆದ ವರ್ಷ ಎರಡನೇ ಸ್ಥಾನ; ಈ ವರ್ಷ ಭಾರೀ ಕುಸಿತ ಕಂಡ ಮಂಡ್ಯ!

ಮಂಡ್ಯ: 2023 – 24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಮಂಡ್ಯ ಜಿಲ್ಲೆ ಫಲಿತಾಂಶದಲ್ಲಿ ಕುಸಿತ ಕಂಡಿದೆ.2022 – 23ನೇ ಸಾಲಿನಲ್ಲಿ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಈ ಬಾರಿ 19ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಈ ಬಾರಿ ಜಿಲ್ಲೆಯಲ್ಲಿ 20,529 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 15,108 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.73.59 ಫಲಿತಾಂಶ ಬಂದಿದೆ. ಇದು ಇತ್ತೀಚಿನ ವರ್ಷದಲ್ಲಿ ಬಂದ ಅತಿ ಕಳಪೆ ಫಲಿತಾಂಶವಾಗಿದೆ. ಕಳೆದ ಸಾಲಿನಲ್ಲಿ ಶೇ.96.04 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿತ್ತು.

ಒಟ್ಟಾರೆ ರಾಜ್ಯದಲ್ಲಿ ಉಡುಪಿಗೆ ಮೊದಲ ಸ್ಥಾನ ಲಭಿಸಿದೆ. ಉಡುಪಿ ಜಿಲ್ಲೆಗೆ ಶೇ. 94 ರಷ್ಟು ಫಲಿತಾಂಶ ಬಂದರೆ, ಯಾದಗಿರಿ ಜಿಲ್ಲೆ ಶೇ. 50.59 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕ್ರಮವಾಗಿ ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಶೇ. 92.12, ಮೂರನೇ ಸ್ಥಾನದಲ್ಲಿ ಶಿವಮೊಗ್ಗ ಶೇ 88.67 ಮತ್ತು ನಾಲ್ಕನೇ ಸ್ಥಾನದಲ್ಲಿ ಕೊಡಗು ಶೇ 88.67 ರಷ್ಟು ತೇರ್ಗಡೆ ಫಲಿತಾಂಶ ಹೊಂದಿವೆ.

Tags:
error: Content is protected !!