Mysore
28
scattered clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಮತ್ತೊಮ್ಮೆ ವಿವಾದತ್ಮಕ ಹೇಳಿಕೆ ನೀಡಿದ ಎಚ್‌ಡಿಕೆ

ತುಮಕೂರು: ಇತ್ತೀಚಿಗೆ ಗ್ಯಾರಂಟಿಯಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ್ಮಾತಕ ಹೇಳಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ ಅಂತದ್ದೆ ಎಡವಟ್ಟು ಮಾಡಿಕೊಂಡಿದ್ದಾರೆ.

ಹೌದು. ಇಂದು(ಏ.20) ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಳ ಮಹಿಳೆಯರು ಮನೆಯ ಪುರುಷರು ಕುಡುಕರು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಮಾಡಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ 2000 ಹಣ ನಿಮಗೆ ಬರುತ್ತಿದೆ. ಆದರೆ ನಿಮ್ಮ ಕುಟುಂಬದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬರುವ ಯಾಜಮಾನರು ಇತ್ತೀಚೆಗೆ 100ಕ್ಕೆ 80ರಿಂದ 90 ಭಾಗ ಕುಡಿಯುವುದಕ್ಕೆ(ಮದ್ಯ ಸೇವನೆ) ಬಳಸುತ್ತಿದ್ದಾರೆ. ಹಿಂದೆ ಸಂಜೆ ಸ್ನೇಹಿತರ ಜೊತೆ ಹೋದ್ರೆ 25 ರೂಪಾಯಿನಲ್ಲಿ ಮುಗಿಸಿಕೊಂಡು ಬರುತ್ತಿದ್ದರು. ಈಗ ಸಣ್ಣ ಬಾಟಲ್ ಗೆ 250, 300 ರೂ. ಕೊಡಬೇಕು. ಅಂದರೆ ತಿಂಗಳಿಗೆ ಐದಾರು ಸಾವಿರ ರೂ. ಆಗುತ್ತದೆ. ಅಂದರೆ ನಿಮ್ಮಿಂದ ವಸೂಲಿ ಮಾಡ್ತಾ ಇದ್ದಾರೆ ಅಂತಾ ನಾನು ಹೇಳ್ತಿಲ್ಲ. ಇದು ಪಿಕ್ ಪಾಕೆಟ್ ಸರಕಾರ, ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

Tags:
error: Content is protected !!