ಚಾಮರಾಜನಗರ: ಹುಲಿ ದಾಳಿಗೆ ಆನೆ ಮರಿಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಊಟಿ ರಸ್ತೆ ಬದಿಯಲ್ಲಿ ನಡೆದಿದೆ.
ಸುಮಾರು ನಾಲ್ಕು ತಿಂಗಳ ಮರಿಯಾನೆಯೊಂದು ಮೂರು ದಿನಗಳ ಹಿಂದೆಯೇ ಹುಲಿ ದಾಳಿಯಿಂದ ಅಸ್ವಸ್ಥಗೊಂಡಿದ್ದು, ಇಂದು (ಏ.೨೦, ಶನಿವಾರ) ಬಂಡೀಪುರದಿಂದ ಊಟಿ ರಸ್ತೆಯಲ್ಲಿ ಕೆಕ್ಕನಹಳ್ಳಿ ಚೆಕ್‌ಪೋಸ್ಟ್ ಕಡೆಗೆ ಸುಮಾರು ಮೂರು ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಮಡಿದಿದೆ.
ಮರಿಯಾನೆ ಮಡಿದದ್ದನ್ನು ಕಂಡು ತಾಯಾನೆ ರೋದಿಸುತ್ತಿರುವ ದೃಶ್ಯ ಕಂಡು ಬಂದಿತು. ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೃತ ದೇಹವನ್ನು ಸ್ಥಳಾಂತರಿಸಿ, ಮುಕ್ತ ಸಂಚಾರಕ್ಕೆ ಅನುಮಾಡಿಕೊಟ್ಟರು.