Mysore
29
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಕಿರುಚುತ್ತಲೇ ವಿಮರ್ಶೆ ನೀಡಿ ವೈರಲ್‌ ಆಗಿದ್ದ ಆಂಗ್ರಿ ರಾಂಟ್‌ಮ್ಯಾನ್‌ ಇನ್ನಿಲ್ಲ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಭಿನ್ನ ಹಾಗೂ ವಿಚಿತ್ರ ವಿಡಿಯೊಗಳಿಂದ ವೈರಲ್‌ ಆದ ಯುಟ್ಯೂಬರ್‌ಗಳಲ್ಲಿ ಒಬ್ಬರಾದ ಅಬ್ರದೀಪ್‌ ಸಹ ತಮ್ಮ 27ನೇ ವಯಸ್ಸಿನಲ್ಲಿಯೇ ಮೃತಪಟ್ಟಿದ್ದಾರೆ.

ಆಂಗ್ರಿ ರಾಂಟ್‌ಮ್ಯಾನ್‌ ಎಂದೇ ಖ್ಯಾತಿಯನ್ನು ಗಳಿಸಿದ್ದ ಅಬ್ರದೀಪ್‌ ಸಹ ಕೆಜಿಎಫ್‌ ಚಿತ್ರವನ್ನು ಹೊಗಳಿ ಅದೇ ವಿಡಿಯೊದಲ್ಲಿ ಬಾಲಿವುಡ್‌ ಅನ್ನು ಕಾಲೆಳೆಯುವ ಮೂಲಕ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು. ಯಾವುದೇ ಚಿತ್ರದ ಬಗ್ಗೆಯಾಗಲಿ ಅಥವಾ ಇನ್ಯಾವುದೇ ವಿಷಯದ ಬಗ್ಗೆಯಾಗಲಿ ಕಿರುಚುತ್ತಲೇ ಮಾತನಾಡುತ್ತಾ ವಿಮರ್ಶೆ ಮಾಡುವ ಮೂಲಕ ಜನರ ಗಮನ ಸೆಳೆದಿದ್ದ ಆಂಗ್ರಿ ರಾಂಟ್‌ಮ್ಯಾನ್‌ ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವೆಂಟಿಲೇಟರ್‌ನಲ್ಲಿ ಇದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಂಗ್ರಿ ರಾಂಟ್‌ಮ್ಯಾನ್‌ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Tags: