ಮೈಸೂರು : ಚಿತ್ರನಟ ದ್ವಾರಕೀಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ನೇಹ ಪ್ರಾರಂಭವಾಗಿದ್ದು ಒಂದು ಹೆಲಿಕಾಫ್ಟರ್ ಪ್ರಯಾಣದಿಂದ.
ದ್ವಾರಕೀಶ್ ಹಾಗೂ ಸಿದ್ದರಾಮಯ್ಯ ಅವರ ಒಡನಾಟದ ಬಗ್ಗೆ ಈ ಹಿಂದೆ ದ್ವಾರಕೀಶ್ ನೀಡಿದ್ದ ಪತ್ರಿಕಾ ಸಂದರ್ಶನದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು.
ಮೈಸೂರಿನ ಹೆಸರಾಂತ ಪ್ರೀಮಿಯರ್ ಸ್ಟೂಡಿಯೋದಲ್ಲಿ ಕನ್ನಡದ ಹೆಸರಾಂತ ನಟಿ ʼಲೀಲಾವತಿʼ ಅವರ ಪುತ್ರ ʼವಿನೋದ್ ರಾಜ್‌ಕುಮಾರ್ʼ ಅವರ ಮೊಟ್ಟಮೊದಲ ಚಿತ್ರ ʼಡ್ಯಾಂಸ್ ರಾಜ ಡ್ಯಾಂಸ್ʼ ಚಿತ್ರದ ಶೂಟಿಂಗ್‌ಗಾಗಿ ಬೃಹತ್ ಸೆಟ್ ಒಂದನ್ನು ಹಾಕಲಾಗಿತ್ತು.
ಇದೇ ವೇಳೆ, ಚಿತ್ರಕ್ಕಾಗಿ ಹೆಲಿಕಾಫ್ಟರ್ ಅಗತ್ಯವಿತ್ತು. ಅದೇ ಸಂಸರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಡೆ ಅವರ ಆಪ್ತ ಸಹಾಯಕ ರಾಮಪ್ಪ ಅವರು ಹೆಲಿಕಾಫ್ಟರ್ ಕೊಡಿಸುವಲ್ಲಿ ಸಹಾಯ ಮಾಡಿದ್ದರು.
ಆದರೆ ಸರ್ಕಾರಿ ಹೆಲಿಕಾಫ್ಟರ್ ಬಳಸುವುದಾದರೆ, ಅದರಲ್ಲಿ ಕ್ಯಾಬಿನೆಟ್ ದರ್ಜೆಯ ವ್ಯಕ್ತಿ ಒಬ್ಬರು ಜೊತೆಯಲ್ಲಿ ಪ್ರಯಾಣಿಸಬೇಕು ಎಂದು ಮುಖ್ಯಮಂತ್ರಿ ಹೆಗ್ಡೆ ಅವರು ಶರತ್ತು ವಿಧಿಸಿದ್ದರು.
ಅಂದಿನ ವಾರ್ತ ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಅವರನ್ನು ಜೊತೆಯಲ್ಲಿ ಪ್ರಯಾಣಿಸುವಂತೆ ದ್ವಾರಕೀಶ್ ಕೇಳಿದಾಗ ಅವರನ್ನು ಬೈದು ಕಳಿಸಿದ್ದರಂತೆ. ಅದೇ ವೇಳೆಗೆ ಸಿದ್ದರಾಮಯ್ಯ ಅವರು ಶಾಸಕರಾಗಿ ಆಯ್ಕೆಯಾಗಿ ಬಂದಿದ್ದರು. ಸಿ
ದ್ದರಾಮಯ್ಯ ಹಾಗೂ ಕನ್ನಡ ಕಾವಲು ಸಮಿತಿ ಅಧಯಕ್ಷರೊಬ್ಬರು ದ್ವಾರಕೀಶ್ ಜೊತೆ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಮೊಟ್ಟ ಮೊದಲ ಬಾರಿಗೆ ಹೆಲಿಕಾಫ್ಟರ್ ಹತ್ತಿದ್ದು ಎಂದು ದ್ವಾರಕೀಶ್ ಸಂದರ್ಶನದಲ್ಲಿ ತಿಳಿಸಿದ್ದಾರೆ.