Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ತಂದೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್‌ ಪುತ್ರಿ

ಬೆಂಗಳೂರು: ಕಳೆದ ಕೆಲ ದಿನಗಳಿಂದ ನಟ ದುನಿಯಾ ವಿಜಯ್‌ ಪುತ್ರಿ ಮೋನಿಕಾ ವಿಜಯ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ಇದೀಗ ಅಧಿಕೃತವಾಗಿದ್ದು, ತಮ್ಮ ತಂದೆ ವಿಜಯ್‌ ನಾಯಕನಾಗಿ ನಟಿಸಲಿರುವ 29ನೇ ಚಿತ್ರದಲ್ಲಿ ಪುತ್ರಿ ಮೋನಿಕಾ ಕೂಡ ಬಣ್ಣ ಹಚ್ಚಲಿದ್ದಾರೆ. ಸಿನಿಮಾಗಾಗಿ ಮೋನಿಕಾ ತಮ್ಮ ಹೆಸರನ್ನು ರಿತನ್ಯಾ ಎಂದು ಬದಲಿಸಿಕೊಂಡಿದ್ದಾರೆ.

ಗುರುವಾರ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಮೋನಿಕಾ ಈ ಚಿತ್ರದಲ್ಲಿ ನಟಿಸುವುದು ಖಾತರಿಯಾಗಿದ್ದು, ಸ್ವತಃ ದುನಿಯಾ ವಿಜಯ್‌ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್‌ಗೆ ನಾಯಕಿಯಾಗಿ ರಚಿತಾ ರಾಮ್‌ ನಟಿಸುತ್ತಿದ್ದು, ʼಜಂಟಲ್‌ಮ್ಯಾನ್‌ʼ, ʼಗುರು ಶಿಷ್ಯರುʼ ನಿರ್ದೇಶಕ, ʼಕಾಟೇರʼ ಬರಹಗಾರ ಜಡೇಶ್‌ ಕುಮಾರ್‌ ಹಂಪಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ಇನ್ನು ವಿಜಯ್‌ ಪುತ್ರಿ ಮೋನಿಕಾ ಸಿನಿಮಾದಲ್ಲಿ ನಟಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದರು. ಹೀಗಾಗಿ ಸಾಕಷ್ಟು ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂಬೈನ ಅನುಪಮ್‌ ಖೇರ್‌ ಸ್ಟುಡಿಯೊದಲ್ಲಿ ನಟನೆ ತರಬೇತಿ ಪಡೆದಿರುವ ಮೋನಿಕಾ ಬೆಂಗಳೂರಿನಲ್ಲಿಯೂ ಅಗತ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸ್ಟಾರ್‌ ಕಿಡ್‌ ಎಂಟ್ರಿಯಾಗಿದೆ.

Tags:
error: Content is protected !!