Mysore
16
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ತಿ. ನರಸೀಪುರದಲ್ಲಿ ಮತಯಾಚಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌

ತಿ. ನರಸೀಪುರ: ಚಾಮರಾಜನಗರ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಇಂದು (ಏ.೧೧) ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ತಾಲ್ಲೂಕಿನ ಸೋಸಲೆ, ಬೆನಕನಹಳ್ಳಿ, ಮುತ್ತಲವಾಡಿ, ದೊಡ್ಡ ಬಾಗಿಲು, ಕೊಳತ್ತೂರು, ಚಿದರವಳ್ಳಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಹಾಗೂ ಮುಖಂಡರ ಜೊತೆ ಗ್ರಾಮದ ಜನರನ್ನು ಭೇಟಿ ಮಾಡಿ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

ಮತದಾನ ಮಾಡುವಂತೆ ಮನವಿ ಮಾಡಿ ಮಾತನಾಡಿದ ಕಾಂಗ್ರೆಸ್‌ ಅಬ್ಯರ್ಥಿ ಸುನೀಲ್ ಬೋಸ್, ತಂದೆಯವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ನನಗೂ ಇಷ್ಟು ದಿನ ಕ್ಷೇತ್ರದೆಲ್ಲೆಡೆ ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ತಂದೆಗೆ ನೀಡಿದ್ದ ಮತಕ್ಕಿಂತ ಹೆಚ್ಚಿನ ಮತ ನನಗೆ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.

 

Tags:
error: Content is protected !!