Mysore
25
few clouds

Social Media

ಶನಿವಾರ, 03 ಜನವರಿ 2026
Light
Dark

IPL 2024: ಸ್ಯಾಮ್ಸನ್‌-ಬಟ್ಲರ್‌ ಜೊತೆಯಾಟದ ಮುಂದೆ ಮಂಡಿಯೂರಿದ ಆರ್‌ಸಿಬಿ!

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 19ನೇ ಪಂದ್ಯದಲ್ಲಿ ಜಾಸ್‌ ಬಟ್ಲರ್‌ ಅವರ ಅಮೋಘ ಶತಕದಾಟ ಹಾಗೂ ನಾಯಕ ಸಂಜು ಸ್ಯಾಮ್ಸನ್‌ ಅವರ ಅರ್ಧಶತಕ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 6 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ.

ಆರ್‌ಸಿಬಿ ವಿರುದ್ಧ ಗೆಲುವು ದಾಖಲಿಸುವ ಮೂಲಕ ತಾವಾಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಆರ್‌ಆರ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ರಾಯಲ್ಸ್‌ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿ ಗೆದ್ದು ಬೀಗಿದೆ.

ಆರ್‌ಸಿಬಿ ಇನ್ನಿಂಗ್ಸ್‌: ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಕೊಹ್ಲಿ ಔಟಾಗದೆ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 113 ರನ್ ಗಳಿಸಿ ಮಿಂಚಿದರೇ, ಫಾಫ್‌ 33 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 44 ರನ್ ಗಳಿಸಿ ಬೃಹತ್‌ ಮೊತ್ತ ಕೆಲಹಾಕುವ ಸೂಚನೆ ನೀಡಿದರು.

ಫಾಫ್‌ ಚಾಹಲ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರೇ, ಬಳಿಕ ಕ್ರೀಸ್‌ಗೆ ಬಂದ ಗ್ರೆನ್ ಮ್ಯಾಕ್ಸ್‌ವೆಲ್ ಕೇವಲ 1 ರನ್ ಗಳಿಸಿ ಬಂದ ದಾರಿಯಲ್ಲೇ ಹಿಂದಿರುಗಿದರು. ಉಳಿದಂತೆ ಸೌರವ್ ಚೌಹಾಣ್ 6 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ ಔಟಾಗದೆ 5 ರನ್ ಗಳಿಸಿದರು.

ರಾಜಸ್ಥಾನದ ಪರ ಯಜುವೇಂದ್ರ ಚಾಹಲ್ 2, ಬರ್ಗರ್ 1 ವಿಕೆಟ್ ಪಡೆದರು.

ರಾಜಸ್ಥಾನ್‌ ಇನ್ನಿಂಗ್ಸ್‌: ತವರಿನಂಗಳದಲ್ಲಿ ಬೃಹತ್‌ ಮೊತ್ತ ಚೇಸ್‌ ಮಾಡಲು ಮುಂದಾದ ಆರ್‌ಆರ್‌ಗೆ ಆರಂಭಿಕ ಆಘಾತ ಉಂಟಾಯಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಸೊನ್ನೆ ಸುತ್ತಿ ಟಾಪ್ಲಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌, ಬಟ್ಲರ್‌ ಜೊತೆಗೂಡಿ ಭರ್ಜರಿ ಇನ್ನಿಂಗ್ಸ್‌ ಕಟ್ಟಿದರು. ನಾಯಕ ಸ್ಯಾಮ್ಸನ್‌ 42 ಎಸೆತ ಎದುರಿಸಿ 8ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 69 ರನ್‌ ಗಳಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಪರಾಗ್‌ 4, ಜುರೆಲ್‌ 2 ರನ್‌ ಗಳಿಸಿ ಬೇಗನೇ ಪೆವಿಲಿಯನ್‌ ಸೇರಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರು ಮತ್ತೊಂದೆಡೆ ನೆಲಕಚ್ಚಿ ಆಡಿದ ಜಾಸ್‌ ಬಟ್ಲರ್‌ ಆರ್‌ಸಿಬಿಯಿಂದ ಮ್ಯಾಚ್‌ ಕಸಿದರು. ಅವರು ಓಟಾಗದೇ 58 ಎಸೆತಗಳಲ್ಲಿ 9ಬೌಂಡರಿ, 4ಸಿಕ್ಸರ್‌ ಸಹಿತ 100 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಹೆಟ್ಮಾಯರ್‌ 11 ರನ್‌ ಗಳಿಸಿ ಸಾಥ್‌ ನೀಡಿದರು.

ಆರ್‌ಸಿಬಿ ಪರ ಟಾಪ್ಲಿ 2, ಯಶ್‌ ದಯಾಳ್‌ ಮತ್ತು ಸಿರಾಜ್‌ ತಲಾ ಒಂದು ವಿಕೆಟ್‌ ಪಡೆದರು.

Tags:
error: Content is protected !!