Mysore
17
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕೆ.ಎಸ್‌ ಈಶ್ವರಪ್ಪ ಮೋದಿ ಫೋಟೋ ಬಳಸುವಂತಿಲ್ಲ: ಆರ್‌.ಅಶೋಕ್‌

ಬೆಂಗಳೂರು: ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌ ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಬಾರದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕೆಎಸ್ ಈಶ್ವರಪ್ಪಗೆ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ. ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರಧಾನಿ ಆಗಿರುವುದರಿಂದ ಮೋದಿ ಫೋಟೊ ಬಳಸಿಕೊಳ್ಳಬಹುದು. ಆದರೆ, ರಾಜಕೀಯವಾಗಿ ಚುನಾವಣೆ ವೇಳೆ‌ ಬಿಜೆಪಿಗೆ ಮಾತ್ರ ಮೋದಿ ಫೋಟೊ ಬಳಕೆಗೆ ಅಧಿಕಾರ ಇದೆ ಎಂದರು.

ಕೆ.ಎಸ್‌ ಈಶ್ವರಪ್ಪ ಮೋದಿ ಅವರ ಫೋಟೋ ಅಕ್ರಮವಾಗಿ ಬಳಸುತ್ತಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮೋದಿ ಫೋಟೋ ಬಳಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:
error: Content is protected !!