ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ನಡೆದಿದೆ.
ತೆಂಕಲಹುಂಡಿ ಗ್ರಾಮದ 70 ವರ್ಷದ ಬೆಳ್ಳೆಗೌಡ ಕಾಡುಹಂದಿ ದಾಳಿಗೆ ತುತ್ತಾಗಿ ರೈತ. ಮಧ್ಯಹ್ನಾ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡುಹಂದಿ ರೈತನ ತೊಡೆ ಮತ್ತು ಕಾಲಿಗೆ ಕೋರೆಯಿಂದ ಬಲವಾಗಿ ತಿವಿಧಿದೆ. ಪರಿಣಾಮ ರೈತ ಬೆಳ್ಳೆಗೌಡ ಕೂಗಿಕೊಂಡಿದ್ದಾರೆ. ರೈತನ ಚೀರಾಟ ನೋಡಿ ಅಕ್ಕಪಕ್ಕದ ಜಮೀನಿನವರು ಸ್ಥಳಕ್ಕೆ ಬರುವಷ್ಟರಲ್ಲಿ ರೈತನ ಮೇಲೆರಗಿದ್ದ ಕಾಡುಹಂದಿ ಓಡಿಹೋಗಿದೆ.
ಗಂಭೀರವಾಗಿ ಗಾಯಗೊಂಡ ಬೆಳ್ಳೆಗೌಡರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.





