Mysore
24
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಲೋಕಸಮರ 2024: ಮತ್ತೊಬ್ಬ ಡಾ. ಸಿಎನ್‌ ಮಂಜುನಾಥ್‌ ವೈದ್ಯನಲ್ಲ ಎಂದ ಬಿಜೆಪಿ!

ರಾಮನಗರ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ( ಏಪ್ರಿಲ್‌ 4 ) ಕೊನೆಯ ದಿನವಾಗಿದ್ದು, ಹಲವು ಅಭ್ಯರ್ಥಿಗಳು ಬೆಳಗ್ಗೆಯೇ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿಎನ್‌ ಮಂಜುನಾಥ್‌ ಹಾಗೂ ಡಿಕೆ ಸುರೇಶ್‌ ಅವರ ಸ್ಪರ್ಧೆ ಈಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇಬ್ಬರೂ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಇದರ ಜತೆಗೆ ಡಾ ಸಿ.ಎನ್‌ ಮಂಜುನಾಥ್‌ ಹೆಸರನ್ನು ಹೋಲುವ ಮತ್ತೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

ಚನ್ನರಾಯಪಟ್ಟಣ ಮೂಲದ ಡಾ ಸಿ.ಎನ್‌ ಮಂಜುನಾಥ್‌ ಬಹುಜನ ಭಾರತ್‌ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಕುರಿತು ಬಿಜೆಪಿ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದು, ಇವರು ಸಲ್ಲಿಸಿರುವ ವಿಶ್ವವಿದ್ಯಾಲಯದ ಸರ್ಟಿಫಿಕೇಟ್‌ ನಕಲಿ ಎಂದು ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಾ. ಸಿಎನ್‌ ಮಂಜುನಾಥ್‌ ಗ್ಲೋಬಲ್ ಹ್ಯೂಮನ್‌ ಪೀಸ್‌ ಯೂನಿವರ್ಸಿಟಿಯಿಂದ ಸಮಾಜ ಸೇವೆಗಾಗಿ ಡಾಕ್ಟರೇಟ್‌ ಪಡೆದುಕೊಂಡಿದ್ದಾರೆ. ಆದರೆ, ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲು ಚಿಂತನೆ ನಡೆಸಿದೆ.

ಇನ್ನು ಈ ಕ್ಷೇತ್ರದಲ್ಲಿ ಮಂಜುನಾಥ್‌ ಎಂಬ ಸ್ಪರ್ಧಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬಿಜೆಪಿಯ ಡಾ ಸಿಎನ್‌ ಮಂಜುನಾಥ್‌, ಬಹುಜನ ಭಾರತ್‌ ಪಾರ್ಟಿಯ ಡಾ ಸಿಎನ್‌ ಮಂಜುನಾಥ್‌, ಪಕ್ಷೇತರರಾಗಿ ಸಿ ಮಂಜುನಾಥ್‌, ಎನ್‌ ಮಂಜುನಾಥ್‌ ಹಾಗೂ ಕೆ ಮಂಜುನಾಥ್‌ ನಾಮಪತ್ರ ಸಲ್ಲಿಸಿದ್ದಾರೆ.

Tags:
error: Content is protected !!