Mysore
27
clear sky

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಬಿಜೆಪಿ ಶಾಲನ್ನು ಕೇಳಿ ಪಡೆದ ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ನಾಯಕರು ಇಂದು ಬೆಂಗಳೂರಿನಲ್ಲಿ ಸಮನ್ವಯ ಸಭೆ ನಡೆಸಿದ್ದಾರೆ. ಈ ಮೂಲಕ ನಾವು ಒಗ್ಗಟ್ಟಿನಲ್ಲಿದ್ದೇವೆ ಎಂದು ಸಾರಿದ್ದಾರೆ.

ಈ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌ ಡಿ ದೇವೆಗೌಡ, ಮಾಜಿ ಸಿಎಂ ಯಡಿಯೂರಪ್ಪ, ಹೆಚ್‌ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್‌ ಆಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಉಭಯ ಪಕ್ಷದ ನಾಯಕರು ಭಾಗಿಯಾಗಿದ್ದರು. ವಿಜಯೇಂದ್ರ ಅವರ ಜೊತೆ ನಿಂತಿದ್ದ ಪ್ರಜ್ವಲ್‌ ರೇವಣ್ಣ ಅವರಿಗೆ ಬೆಂಬಲಿಗರು ಬಿಜೆಪಿ ಪಕ್ಷದ ಶಾಲು ಹಾಕಲು ಮುಂದಾದರು. ಆಗ ನಿಖಿಲ್‌ ಕುಮಾರಸ್ವಾಮಿ ಅವರು ಸಹ ಒಟ್ಟಿಗೆ ಸೇರಿದ್ದೇವೆ ಬಿಜೆಪಿ ಶಾಲನ್ನು ಕೊಡಿ ಎನ್ನುತ್ತಾ ಎರಡೂ ಪಕ್ಷದ ಶಾಲನ್ನು ಹಾಕಿಕೊಂಡರು.

Tags:
error: Content is protected !!