Mysore
23
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕೋರ್ಟ್‌ ಕಸ್ಟಡಿಗೆ ಶಾಸಕ ಗಣಿಗ ರವಿ !

ಮಂಡ್ಯ : ಶಾಸಕ ಗಣಿಗ ರವಿಕುಮಾರ್‌ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೆ ಪೊಲೀಸರು ರವಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಉದ್ಯಮಿ ಅಶೋಕ್‌ ಖೇಣಿ ಅವರಿಗೆ ನಿಂಧನೆ ಮಾಡಿರುವ ಆರೋಪದ ಅಡಿಯಲ್ಲಿ ರವಿ ಕುಮಾರ್‌ ವಿರುದ್ಧ ಕೇಸ್‌ ದಾಖಲು ಮಾಡಲಾಗಿತ್ತು. ಈ ಸಂಬಂಧ ಜನಪ್ರತಿನಿಧಿ ನ್ಯಾಯಾಲಯಕ್ಕೆ ರವಿ ಹಾಜರಾಗಿದ್ದರು.

೨೦೧೩ರಲ್ಲಿ ನೈಸ್‌ ರಸ್ತೆಗೆ ಸಂಬಂಧಿಸಿದಂತೆ ಜೆಡಿಎಸ್‌ನಿಂದ ಬೃಹತ್‌ ಪರತಿಭಟನೆ ನಡೆಸಲಾಗಿತ್ತು. ಈ ವೇಳೆ ಹೆಚ್‌.ಡಿ.ದೇವೇಗೌಡರ ಜೊತೆ ಗಣಿಗ ರವಿಕುಮಾರ್‌ ಕೂಡ ಭಾಗಿಯಾಗಿದ್ದರು.

ಪ್ರತಿಭಟನೆ ವೇಳೆ ರವಿ ಕುಮಾರ್‌ ಅಶೋಕ್‌ ಖೇಣಿ ಮೇಲೆ ಹಲ್ಲೆಗೆಯತ್ನಿಸಿದ್ದಾರೆ ಎಂದು ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿತ್ತು.

ಈ ಸಂಬಂಧ ಮ್ಯಾಯಾಲಯದಲ್ಲಿ ಕೇಸ್‌ ನಡೆಯುತ್ತಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗಲು ಎಷ್ಟೇ ಆದೇಶ ಬಂದಿದ್ದರು ರವಿ ಕುಮಾರ್‌ ನಿರಾಕರಿಸಿದ್ದರು. ಈ ಬಾರಿ ನಾನ್‌ ಬೇಲ್‌ಎಬಲ್‌ ವಾರೆಂಟ್‌ ನೀಡಲಾಗಿತ್ತು.

ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರವಿಕುಮಾರ್‌ ಅವರನ್ನು ಪೊಲೀಸರ ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶ ಮಾಡಿದೆ. ಆದೇಶದ ಮೇರೆಗೆ ಶಾಸಕ ರವಿ ಗಣಿಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Tags: