Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮತ್ತೊಂದು ಪೆಟ್ಟು ತಿಂದು ಸಹಿಸುವ ಶಕ್ತಿ ಇಲ್ಲ ಎಂದು ನಿಖಿಲ್‌ ಹೇಳಿದ್ದಾನೆ : ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ಮತ್ತೊಮ್ಮೆ ಪೆಟ್ಟು ತಿಂದು ಸಹಿಸುವ ಶಕ್ತಿ ನನಗಿಲ್ಲ ಎಂದು ನಿಖಿಲ್‌ ನನ್ನ ಬಳಿ  ಹೇಳಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಪೆಟ್ಟು ತಿಂದಿದ್ದೇನೆ, ಮೂರನೆ ಬಾರಿ ಹೆಚ್ಚು ಕಮ್ಮಿ ಆದರೆ ತಡೆಯುವ ಶಕ್ತಿ ಇಲ್ಲ ಎಂದು ನಿಖಿಲ್‌ ನನ್ನ ಬಳಿ ಹೇಳಿದ್ದಾನೆ ಎಂದು ಹೇಳಿದರು.

ರಾಜಕೀಯದಲ್ಲಿ ಮತ್ತೊಮ್ಮೆ ಪೆಟ್ಟು ತಿಂದು ತಡೆದುಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ನನಗೆ ಆತುರ ಇಲ್ಲ. ಪಕ್ಷ ಸಂಘಟನೆ ಮಾಡುತ್ತೆನೆ. ನಿಮಗೂ ಆರೋಗ್ಯ ಸರಿ ಇಲ್ಲದ ಕಾರಣ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ನಿಖಿಲ್‌ ತಿಳಿಸಿದ್ದಾನೆ ಎಂದರು.

ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ನಮ್ಮ ಪಕ್ಷದ ಎಲ್ಲಾ ನಾಯಕರ ಮುಂದೆ ಹೇಳಿದ್ದಾನೆ.

ನಿಖಿಲ್‌ ಮನವೊಲಿಸಲು ಪಕ್ಷದ ಎಲ್ಲಾ ಹಿರಿಯ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಆದರೇ ಈ ಬಾರಿ ನಿಖಿಲ್‌ ಸ್ಪರ್ಧೆ ಮಾಡುವುದಿಲ್ಲ ಎಂದು ಕಠಿಣ ನಿರ್ಧಾರ ಮಾಡಿದ್ದಾನೆ ಎಂದು ತಿಳಿಸಿದರು.

ಹೀಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ, ಮಂಡ್ಯ ಜಿಲ್ಲೆಯ ಜನರ ರುಣ ತೀರಿಸುವ ನಿಟ್ಟಿನಲ್ಲಿ ಅವರ ಅಸೆಯಂತೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

Tags: