Mysore
26
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮಾಸ್ಟರ್ ಟ್ರೈನರ್ ಗಳಿಗೆ ಜಿಲ್ಲಾಧಿಕಾರಿಳಿಂದ ಚುನಾವಣಾ ತರಬೇತಿ !

ಮಂಡ್ಯ: ಚುನಾವಣಾ ಪ್ರಕ್ರಿಯೆಯಲ್ಲಿ ಪಿಆರ್ಒ ಮತ್ತು ಎಪಿಆರ್ಒಗಳ ಕೆಲಸ ಮಹತ್ವದಾಗಿದ್ದು, ಅವರಿಗೆ ತರಬೇತಿ ನೀಡಿ ಸಜ್ಜುಗೊಳಿಸುವ ಮಾಸ್ಟರ್ ಟ್ರೈನರ್ಸ್ ಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಚುನಾವಣಾ ತರಬೇತಿ ನೀಡಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನ

ಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ವಿಷಯದಲ್ಲಿ ಗೊಂದಲಗಳಿದ್ದಲ್ಲಿ ತಕ್ಷಣವೇ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ 1824 ಚುನಾವಣಾ ಬೂತ್ ಗಳಿದ್ದು ಪ್ರತಿ ಮತಗಟ್ಟೆಗಳಲ್ಲು ಪಿಆರ್ಒ ಹಾಗೂ ಎಪಿಆರ್ಒಗಳು ಇರುತ್ತಾರೆ. ಮತ ಚಲಾವಣೆ ದಿನದಂದು ಯಾವುದೇ ರೀತಿ ಗಾಬರಿ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಆಗಾಗಿ ತರಬೇತಿ ಸಮಯದಲ್ಲಿಯೇ ಗಂಭೀರವಾಗಿ ತರಬೇತಿ ಪಡೆದುಕೊಂಡು, ಏನೇ ಅನುಮಾನಗಳಿದ್ದಲ್ಲಿ ಪರಿಹರಿಸಿಕೊಳ್ಳಿ ಎಂದು ಹೇಳಿದರು.

ಪಿ.ಆರ್.ಒ ಹಾಗೂ ಎ.ಪಿಆರ್.ಒ ಗಳಿಗೆ ಪ್ರಥಮ ಹಂತದ ತರಬೇತಿಯನ್ನು ಏಪ್ರಿಲ್ 7 ರಂದು ಹಮ್ಮಿಕೊಳ್ಳಲಾಗುವುದು. ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್, ಹಾಗೂ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು

Tags:
error: Content is protected !!