ಮಡಿಕೇರಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶವನ್ನು ಬರೆದು ವಿಡಿಯೋವೊಂದನ್ನು ಹರಿಬಿಟ್ಟು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಮಾಡಿರುವ ಆರೋಪದಡಿ ಓರ್ವ ವ್ಯಕ್ತಿಯನ್ನು ಕೊಡಗು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಯಾಗಿರುವ ಪ್ರಸ್ತುತ ಉತ್ತರಪ್ರದೇಶ ರಾಜ್ಯದ ಮುಜಾಫರ್ ನಗರ ಜಿಲ್ಲೆ ಖತೋಲಿಯಲ್ಲಿರುವ ಸುಧಾಕರ್ ರಾವ್ (55) ಬಂಧಿತ ಆರೋಪಿ. ಇದೇ ಮಾ.19 ರಂದು ಸುಳ್ಳು ಸಂದೇಶ ಹರಿಬಿಟ್ಟ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





