ಬೆಂಗಳೂರು : ಯಾವುದೇ ಕಾರಣಕ್ಕು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಸದಾನಂದ ಗೌಡ ಸ್ಪಷ್ಠಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೨೪ರ ಲೋಕಸಭಾ ಚುನಾವಣಾ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ನನ್ನ ಮುಂದಿನ ನಡೆ ಬಗ್ಗೆ ಅನೇಕ ಪ್ರಶ್ನೆಗಳು, ಉಹಾ-ಪೋಹಗಳು ಸೃಷ್ಠಿಯಾಗಿದ್ದವು ಅದೆಲ್ಲದಕ್ಕು ಉತ್ತರ ನೀಡುವ ಕಾಲ ಬಂದಿದೆ ಎಂದು ತಿಳಿಸಿದರು.
ಕೆಲವು ಪ್ರಮುಖ ಪ್ರಶ್ನೆಗಳಿಗೆ ನನ್ನ ಉತ್ತರಗಳು ಹೀಗಿವೆ !
- ಪ್ರಶ್ನೆ : ಟಿಕೆಟ್ ಕೈತಪ್ಪಿದ್ದಕ್ಕೆ ಸದಾನಂದ ಗೌಡರಿಗೆ ನೋವು, ದುಖಃ ಆಗಿದೆಯೇ ?
ಹೌದು ದುಖಃ ಆಗಿದೆ.
- ಪ್ರಶ್ನೆ : ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆಯೇ ?
ಹೌದು ಬಂದಿದೆ.
- ನೀವು ಕಾಂಗ್ರೆಸ್ ಸೇರುತ್ತೀರ ?
ಇಲ್ಲ.
- ನಿಮ್ಮ ಮುಂದಿನ ರಾಜಕೀಯ ನಡೆ ಏನು ?
ಕರ್ನಾಟಕದ ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ಮುಂದುವರೆದ ನಡಿಗೆ.
- ಟಿಕೆಟ್ ನೀಡದೆ ನಿಮಗೆ ಅಪಮಾನ ಮಾಡಿದ್ದಾರಲ್ಲ ಅದಕ್ಕೆ ಏನು ಉತ್ತರ ?
ಮುಂದಿನದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ ಎಂದು ತಿಳಿಸಿದರು.