Mysore
22
broken clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 26 ವರ್ಷ ಶಿಕ್ಷೆ

ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 26 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಅಧಿಕ ಸೆಷನ್ಸ್ ಮತ್ತು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮಂಡ್ಯ ನಗರದ ಹಾಲಹಳ್ಳಿ ಲೇಬರ್ ಕಾಲೋನಿಯ ಮುಸ್ಲಿಂ ಬ್ಲಾಕ್ 10ನೇ ಕ್ರಾಸ್‌ನ ಗೌನ್ ಪಾಷಾ ಅವರ ಮಗ ಜಿ. ಸಲ್ಮಾನ್ ಪಾಷಾ (26) ಶಿಕ್ಷೆಗೊಳಗಾದ ಅಪರಾಧಿ.

ಆರೋಪಿ ಸಲ್ಮಾನ್ ಪಾಷ ಬಡಾವಣೆಯ ಬಾಲಕಿ ಶಾಲೆಗೆ ಮತ್ತು ಟ್ಯೂಷನ್‌ಗೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ತಿಂಡಿ ಕೊಟ್ಟು ಮಾತನಾಡಿಸುತ್ತಿದ್ದನು. ಆಕೆ ಪ್ರತಿದಿನ ಸಂಜೆ ಟ್ಯೂಷನ್‌ಗೆ ಹೋಗುವಾಗ ಆರೋಪಿಯು ಬಾಲಕಿಯನ್ನು ಯಾರೂ ಇಲ್ಲದ ಸಮಯದಲ್ಲಿ ತನ್ನ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

2022ನೇ ಜುಲೈ 3ರಂದು ರಾತ್ರಿ ಊಟ ಮುಗಿಸಿ ತಮ್ಮ ಮನೆಯ ರೂಂನಲ್ಲಿ ಮಲಗಿದ್ದ ಬಾಲಕಿಯನ್ನು ರೂಂನ ಕಿಟಕಿಯ ಮೂಲಕ ಕೂಗಿ ಎಬ್ಬಿಸಿ ಮನೆಯಿಂದ ಹೊರಗೆ ಕರೆದು, ನಂತರ ಗಿಫ್ಟ್ ಕೊಡುವುದಾಗಿ ಹೇಳಿ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಪ್ರಕರಣ ಕುರಿತಂತೆ ದೂರು ದಾಖಲಾದ ನಂತರ ಐಪಿಸಿ ಸೆಕ್ಷನ್‌ 354(ಡಿ), 366, 378(ಎಬಿ), 376 (2)(ಎನ್) ಐಪಿಸಿ & ಕಲಂ 6, 12 ಪೋಕ್ಸೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಇನ್‌ಸ್ಪೆಕ್ಟರ್ ಎಸ್.ಕೆ. ಕೃಷ್ಣ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ವಿಶೇಷ ಪ್ರಕರಣ ಕುರಿತಂತೆ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ಅವರ ಮುಂದೆ ವಿಚಾರಣೆ ನಡೆದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಸಲ್ಮಾನ್ ಪಾಷನಿಗೆ ಐಪಿಸಿ ಕಲಂ 354(ಡಿ) ಮತ್ತು ಫೋಕ್ಸೋ ಕಾಯ್ದೆ ಕಲಂ 12 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು ಹಾಗೂ ಐಪಿಸಿ ಕಲಂ 363 ಮತ್ತು 366 ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು ಹಾಗೂ ಐಪಿಸಿ ಕಲಂ 447 ಅಡಿಯಲ್ಲಿನ ಅಪರಾಧಕ್ಕೆ 3 ತಿಂಗಳ ಕಠಿಣ ಶಿಕ್ಷೆ ಮತ್ತು 500 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ.

ಐಪಿಸಿ ಕಲಂ 376ಎಬಿ ಮತ್ತು ಫೋಕ್ಸೋ ಕಾಯ್ದೆ ಕಲಂ 6 ಅಡಿಯಲ್ಲಿನ ಅಪರಾಧಕ್ಕೆ 21 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷ ಕಠಿಣ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಸಂತ್ರಸ್ತ ಯುವತಿಯ ಪರ ವಾದ ಮಂಡಿಸಿದರು.

Tags:
error: Content is protected !!