ಮೈಸೂರು: ಶ್ರೀ ಶ್ರೀ ಸುಶಮೀoದ್ರ ತೀರ್ಥರ ಸೇವಾ ಸಂಘ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 429ನೇ ವರ್ದಂತಿ ಅಂಗವಾಗಿ ಭಕ್ತಾದಿಗಳಿಗೆ ಲಾಡು ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸುಶಮೀoದ್ರ ತೀರ್ಥರ ಸೇವಾ ಸಂಘದ ಉಪಾಧ್ಯಕ್ಷ ವರುಣ ಮಹದೇವ್ ತಿಳಿಸಿದ್ದಾರೆ.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮಾರ್ಚ್ 16 ರಂದು ಬೆಳಗ್ಗೆ 10 ಗಂಟೆಗೆ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಹರೀಶ್ ಗೌಡ, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಉದ್ಯಮಿ ಜಿ ರವಿ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಉದ್ಯಮಿ ಓಂಕಾರ್ ಆನಂದ್,ಶ್ರೀ ಶ್ರೀ ಸುಶಮೀoದ್ರ ತೀರ್ಥರ ಸೇವಾ ಸಂಘ ಅಧ್ಯಕ್ಷರಾದ ಡ್ರೈ ಗೋಬಿ ನಾಗರಾಜ್, ಬೈರತಿ ಲಿಂಗರಾಜು, ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.