Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಗ್ರಹವಾಗಿದ್ದು ಬರೋಬ್ಬರಿ 3 ಕೋಟಿ!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ಮಾರ್ಚ್ 6 ರಿಂದ 11 ರವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬರೋಬ್ಬರಿ 3.24 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ವಿಶೇಷವೆಂದರೆ ಈ ಹಣ ಹುಂಡಿ ಕಾಣಿಕೆ ಮತ್ತು ವಸತಿ ವ್ಯವಸ್ಥೆಯ ಶುಲ್ಕದಿಂದ ಗಳಿಸಿದ ಹಣವನ್ನು ಹೊರತುಪಡಿಸಿದ ಆದಾಯವಾಗಿದೆ.

ಮಲೆ ಮಹದೇಶ್ವರ ಬೆಟ್ಟದ ದೇಗುಲದ ಆಡಳಿತ ಮಂಡಳಿಯು ಎಲ್ಲಾ ರೀತಿಯ ಉತ್ಸವಗಳು, ಸೇವೆಗಳು, ಲಡ್ಡು ಪ್ರಸಾದ ಮಾರಾಟ ಮತ್ತು ಇತರ ಪ್ರಸಾದ, ವಿಶೇಷ ದರ್ಶನ ಟಿಕೆಟ್‌ಗಳು, ಬ್ಯಾಗ್‌ಗಳು, ಸ್ಟಾಲ್ ಒಪ್ಪಂದಗಳು ಮತ್ತು ಇತರ ಎಲ್ಲಾ ಆದಾಯದ ಮೂಲಗಳನ್ನು ಗಣನೆಗೆ ತೆಗೆದುಕೊಂಡಿದೆ.

ಆರು ದಿನಗಳಲ್ಲಿ ಲಡ್ಡು ಮಾರಾಟದ ಮೂಲಕ 1.13 ಕೋಟಿ ರೂ., ಚಿನ್ನದ ರಥದ ಸೇವೆಯಿಂದ 90.25 ಲಕ್ಷ ರೂ., ವಿಶೇಷ ದರ್ಶನ ಟಿಕೆಟ್‌ನಿಂದ 67.70 ಲಕ್ಷ ರೂ., ಪ್ರಸಾದ ಮಾರಾಟದಿಂದ 11.93 ಲಕ್ಷ ರೂ., ಸ್ಟಾಲ್ ಒಪ್ಪಂದದ ಮೂಲಕ 10.52 ಲಕ್ಷ ರೂ. ಆದಾಯ ಬಂದಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಆರು ದಿನಗಳ ಪೈಕಿ ಮಾರ್ಚ್ 6 ರಂದು 40.17 ಲಕ್ಷ ರೂ., ಮಾರ್ಚ್ 7 ರಂದು 30.21 ಲಕ್ಷ ರೂ., ಮಾರ್ಚ್ 8 ರಂದು 70.85 ಲಕ್ಷ ರೂ., ಮಾರ್ಚ್ 9 ರಂದು 62.78 ಲಕ್ಷ ರೂ., ಮಾರ್ಚ್ 10 ರಂದು 87.92 ಲಕ್ಷ ರೂ. ಮತ್ತು ಮಾರ್ಚ್ 11 ರಂದು 32.21 ಲಕ್ಷ ರೂ. ಆದಾಯ ಸಂಗ್ರವಾಗಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ