Mysore
32
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಮೈಸೂರು-ಕೊಡಗು ಲೋಕ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರತಾಪ್‌ ಸಿಂಹ ಅಚ್ಚರಿಯ ಹೇಳಿಕೆ!

ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಮತ್ತು ಭವಿಷ್ಯವನ್ನು ನಿರ್ಧರಿಸುವವರು ಜನರು. ಅವರನ್ನೊಮ್ಮೆ ಕೇಳಿದರೆ ಟಿಕೆಟ್ ಯಾರಿಗೆ ಸಿಗಬೇಕು ಎಂದು ಅವರು ಉತ್ತರಿಸುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿಯಿಂದ ಪ್ರತಾಪ್‌ ಸಿಂಹ ಬದಲಿಗೆ ರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ಪರ್ಧಿಸಲಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿದ್ದು, ಲೋಕಸಭಾ ಚುನಾವಣೆ ಸಂಬಂಧ ಮೈಸೂರಲ್ಲಿಂದು (ಮಾ.೯) ಮಾಧ್ಯಮಗಳೊಂದಿಗೆ ಸಂಸದ ಸಿಂಹ ಮಾತನಾಡಿದ್ದಾರೆ.

ಕರ್ನಾಟಕದಿಂದ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾದವರಲ್ಲಿ ಕೇವಲ ತೇಜಸ್ವೀ ಸೂರ್ಯ ಮಾತ್ರ ಮೊದಲ ಬಾರಿಗೆ ಸಂಸದರಾಗಿದ್ದವರು ಮತ್ತು ತಾನು ಎರಡನೇ ಬಾರಿಗೆ ಸಂಸದನಾಗಿ ಆಯ್ಕೆಯಾಗಿದ್ದೆ. ಆದರೆ ಉಳಿದವರೆಲ್ಲ ಐದಾರು ಬಾರಿ ಅಯ್ಕೆಯಾದವರು, ಹಾಗಾಗಿ ತನಗೆ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಸಿಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.

ನಾನು ಸಂಸದನಾಗಿ ಕ್ಷೇತ್ರಕ್ಕೆ ಆಯ್ಕೆಯಾಗಿ ಹಲವಾರು ಪ್ರಗತಿ ಕಾರ್ಯಗಳನ್ನು ಮಾಡಿದ್ದೇನೆ. ಎರಡು ಅವಧಿಗಳಲ್ಲೂ ಹಿಂದೂತ್ವ ಮತ್ತು ಅಭಿವೃದ್ಧಿ ಕೆಲಸಗಳೇ ತನ್ನ ದ್ಯೇಯಗಳಾಗಿದ್ದವು ಎಂದರು.

ಸಂಸದನಾಗಿ ನಾನು ಮಾಡದ ಕೆಲಸ ಯಾವುದೂ ಇಲ್ಲ, ಇದಕ್ಕೆ ನನಗೆ ಮತ ನೀಡಿ ಗೆಲ್ಲಿಸಿದ ಜನರೇ ಸಾಕ್ಷಿಯಾಗಿದ್ದಾರೆ. ಅಂತಿಮವಾಗಿ ಯಾರೇ ತನ್ನ ಕೈಬಿಟ್ಟರೂ ತಾಯಿ ಚಾಮುಂಡೇಶ್ವರಿ ಕೈ ಬಿಡಲ್ಲ ಎಂದು ಪ್ರತಾಪ್‌ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!