ಹಾಸನ: ಮಂಡ್ಯ ಮೂಲಕ ವ್ಯಕ್ತಿಯೊಬ್ಬರು ಖಾಸಗಿ ಬಸ್‌ನಲ್ಲಿ ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಇಲ್ಲೇನಹಳ್ಳಿ ಗ್ರಾಮದ ಟಿ.ಸ್ವಾಮಿ (39) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಪ್ರಯಾಣದ ವೇಳೆ ಹೃದಯಾಘಾತದಿಂದ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಮುಂಬೈನಿಂದ ಮಂಡ್ಯಕ್ಕೆ ಹೋಗುತ್ತಿದ್ದ GA-07-T-3303 ನಂಬರ್‌ನ ಸ್ಲೀಪರ್ ಕೋಚ್ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಚನ್ನರಾಯಪಟ್ಟಣದಲ್ಲಿ ವಿಶ್ರಾಂತಿಗೆಂದು ಬಸ್ ನಿಲ್ಲಿಸಿದ್ದಾರೆ.
ಎಲ್ಲಾ ಪ್ರಯಾಣಿಕರೆಲ್ಲರೂ ಕೆಳಗಿಳಿದರೂ ಸ್ವಾಮಿ ಮಾತ್ರ ಇಳಿದಿರಲಿಲ್ಲ. ನಿರ್ವಾಹಕ ಅವರನ್ನು ತಟ್ಟಿ ಎಬ್ಬಿಸಲು ಯತ್ನಿಸಿದರು ಎಚ್ಚರಗೊಳ್ಳದ ವ್ಯಕ್ತಿಯ ಮೇಲೆ ಅನುಮಾನಗೊಂಡು ಪರಿಶೀಲಿಸಿದಾಗ ಮೃತರಾಗಿರುವುದು ತಿಳಿದು ಬಂದಿದೆ.
ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.