Mysore
22
light rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಭಾರತ್‌ ರೈಸ್‌ ಖರೀದಿಗೆ ಮುಗಿಬಿದ್ದ ಜನ !

ಬೆಂಗಳೂರು :  ಕಡಿಮೆ ದರದಲ್ಲಿ ಭಾರತ್ ರೈಸ್ ಮಾರಾಟವಾಗ್ತಿದ್ದು,ಕೆಜಿ ಅಕ್ಕಿಗೆ ರಿಯಾಯಿತಿ ದರದಲ್ಲಿ 29 ರೂಗೆ ಮಾರಾಟ‌ವಾಗ್ತಿದೆ. ಮೊಬೈಲ್ ವ್ಯಾನ್ ಗಳ ಮೂಲಕ ಭಾರತ್ ಅಕ್ಕಿ ಮಾರಾಟ ಮಾಡಲಾಗಿದೆ.ಮಾರ್ಕೇಟ್ ಗೆ ಬರುತ್ತಿರುವ ಅಕ್ಕಿ ಅತೀವೇಗದಲ್ಲಿ ಖಾಲಿ ಖಾಲಿಯಾಗಿದೆ.

29 ರೂಪಾಯಿಗೆ ಒಂದು ಕೆಜಿ ಅಕ್ಕಿ ಸಿಗುತ್ತಿದೆ.ಕಡಿಮೆ ದರದಲ್ಲಿ ಸಿಗುತ್ತಿರುವ ಕಾರಣ ಜನ ತಾ ಮುಂದು ನಾ ಮುಂದು ಅಂತಾ ಜನ ಬರ್ತಿದ್ದಾರೆ.ನಾಫೆಡ್ಸ್ ನಿಂದ 29 ರೂಪಾಯಿ ಅಕ್ಕಿ ವಿತರಣೆ ಮಾಡಲಾಗುತ್ತೆ.

ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಗೆ ವಿತರಣೆ ಮಾಡಲಾಗಿದೆ.ಒಟ್ಟು 25 ಮೊಬೈಲ್ ವ್ಯಾನ್ ಗಳ ಮೂಲಕ ಅಕ್ಕಿ ವಿತರಣೆ ಮಾಡಿದೆ.
ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವ್ಯಾನ್ಸ್ ಸೇವೆ ಮಾಡಲಾಗ್ತಿದೆ.

ರಾಜ್ಯಾದ್ಯಂತ 20 ಮೊಬೈಲ್ ವಾನ್ ಗಳು ಸಂಚರಿಸುತ್ತಿದೆ.ಎಲ್ಲಾ ರಿಲಾಯನ್ಸ್ ಮಾರ್ಟ್ ಗಳಲ್ಲಿ ನಾಳೆ ಅಥವಾ ನಾಡಿದ್ದು ದಿನಗಳಲ್ಲಿ ಅಕ್ಕಿ ಸಿಗಲಿದೆ.ಆನ್ ಲೈನ್ ಹೋಂ ಡಿಲವರಿ ಆಯಪ್ ಗಳಲ್ಲೂ ಅಕ್ಕಿ ದೊರೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!