Mysore
16
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

IND vs ENG 2nd Test: ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್‌ಗೆ 336; 200ರತ್ತ ಜೈಸ್ವಾಲ್ ಚಿತ್ತ

ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತ ಟೀಮ್‌ ಇಂಡಿಯಾ ಇಂದು ( ಫೆಬ್ರವರಿ 2 ) ವಿಶಾಖಪಟ್ಟಣದ ವೈಎಸ್‌ ರಾಜಶೇಖರ ರೆಡ್ಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೆಣಸಾಟ ನಡೆಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್‌ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 336 ರನ್‌ ಗಳಿಸಿದೆ. ಆರಂಭಿಕನಾಗಿ ಕಣಕ್ಕಿಳಿದು ಭರ್ಜರಿ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್‌ 257 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ 179 ರನ್‌ ಕಲೆಹಾಕಿ ಅಜೇಯರಾಗಿ ಉಳಿದುಕೊಂಡಿದ್ದು ದ್ವಿಶಕದತ್ತ ಚಿತ್ತ ನೆಟ್ಟಿದ್ದಾರೆ. 5 ರನ್‌ ಗಳಿಸಿರುವ ರವಿಚಂದ್ರನ್‌ ಅಶ್ವಿನ್‌ ಸಹ ಅಜೇಯರಾಗಿ ಉಳಿದುಕೊಂಡಿದರು.

ಇನ್ನುಳಿದಂತೆ ನಾಯಕ ರೋಹಿತ್‌ ಶರ್ಮಾ 14, ಶುಬ್‌ಮನ್‌ ಗಿಲ್‌ 34, ಶ್ರೇಯಸ್‌ ಅಯ್ಯರ್‌ 27, ರಜತ್‌ ಪಾಟಿದಾರ್‌ 32, ಅಕ್ಷರ್‌ ಪಟೇಲ್‌ 27 ಹಾಗೂ ಶ್ರೀಕರ್‌ ಭರತ್‌ 17 ರನ್‌ ಗಳಿಸಿದರು. ಇಂಗ್ಲೆಂಡ್‌ ಪರ ಶೋಯೆಬ್‌ ಬಷೀರ್‌ ಹಾಗೂ ರೆಹಾನ್‌ ಅಹ್ಮದ್‌ ತಲಾ ಎರಡು ವಿಕೆಟ್‌ ಪಡೆದರೆ, ಟಾಮ್ ಹಾರ್ಟ್ಲಿ ಹಾಗೂ ಜೇಮ್ಸ್‌ ಆಂಡರ್‌ಸನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!