ಉತ್ತರ ಪ್ರದೇಶ: ಬಾಲಿವುಡ್ ನಟಿ ಹಾಗೂ ಮಾಡೆಲ್ ಕ್ವೀನ್ ಪೂನಂ ಪಾಂಡೆ ಅವರು ಇಂದು (ಫೆ.2) ನಿಧನರಾದರು.
ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 32 ವರ್ಷದ ಪೂನಂ ಪಾಂಡೆ ಶುಕ್ರವಾರ ಬೆಳಿಗ್ಗೆ ಉತ್ತರ ಪ್ರದೇಶದ ಕಾನ್‌ಪುರ್ ನಲ್ಲಿ ನಿಧನ ಹೊಂದಿದ್ದಾರೆ.
ನಟಿಯಾಗಿ ಹಾಗೂ ಮಾಡೆಲ್ ಆಗಿ ಪೂನಂ ಪಾಂಡೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ರು ಜೊತೆಗೆ ಅವರು ಮಾಡಿಕೊಂಡ ವಿವಾದಗಳು ಹಲವು ಅವರನ್ನು ಜನಪ್ರಿಯತೆಗೊಳಿಸಿತ್ತು. ಕಾಂಟ್ರೋವರ್ಷಿಯಲ್ ಸ್ಟಾರ್ ಎಂದೇ ಹೆಸರಾಗಿದ್ದ ಇವರ ಮೃತಪಟ್ಟ ಸುದ್ದಿಯನ್ನು ಅವರ ಇನ್ಸ್ಟಾಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ. ಪೂನಂರ ಮರಣ ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.