Mysore
29
broken clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಕಾರ್ಮಿಕ ಮುಖಂಡರಾದ ಟಿ ಎಸ್‌ ಅನಂತ್‌ರಾಮ್‌ ನಿಧನ

ಹೆಸರಾಂತ ವಕೀಲರು ಹಾಗೂ ಕಾರ್ಮಿಕ ಮುಖಂಡರಾಗಿದ್ದ ಕಾಂ.ಟಿ ಎಸ್ ಅನಂತ್ ರಾಮ್ ಅವರು ನಿಧನರಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಆರೋಗ್ಯದ ವಿಪರೀತ ಏರುಪೇರು ಕಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಮೂಲಕ ಸಾರ್ವಜನಿಕ ಜೀವನ ಆರಂಭಿಸಿ ನಂತರ ಸಿಐಟಿಯುನ ರಾಜ್ಯ ನಾಯಕರಾಗಿ, ತದನಂತರ ತಮ್ಮದೇ ಆದ ಟ್ರೇಡ್ ಯೂನಿಯನ್ ಹುಟ್ಟು ಹಾಕಿ ಅನಂತ್‌ರಾಮ್‌ ಮುನ್ನಡೆಸುತ್ತಿದ್ದರು.

ಇಂದು(ಮಂಗಳವಾರ) ಸಂಜೆ 4:30ಕ್ಕೆ ಚಾಮರಾಜ ಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!