Mysore
20
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಏಷ್ಯಾ ಕಪ್ ಫುಟ್ಬಾಲ್‌: ಭಾರತಕ್ಕೆ ಸೋಲುಣಿಸಿದ ಆಸ್ಟ್ರೇಲಿಯಾ

ಬೆಂಗಳೂರು: ಏಷ್ಯಾಕಪ್-2024ರ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಫುಟ್ಬಾಲ್‌ ತಂಡವು 0-2 ಗೋಲುಗಳ ಅಂತರದಿಂದ ಭಾರತ ಫುಟ್ಬಾಲ್‌ ತಂಡವನ್ನು ಪರಾಭವಗೊಳಿಸಿತು.

ಆದರೆ ಅಲ್ ರಿಯಾನ್‌ನ ಅಹ್ಮದ್ ಬಿನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸೀಸ್‌ ತಂಡ ಗೆದ್ದು ಬೀಗಿತು.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 50 ನಿಮಿಷ ಕಾಲ ಸಮಬಲ ಸಾಧಿಸಿತ್ತು. 2011ರ ಏಷ್ಯನ್ ಕಪ್ ಅಭಿಯಾನದಲ್ಲಿ ಇಂಥದ್ದೇ ಪಂದ್ಯದಲ್ಲಿ ಭಾರತ ಮಧ್ಯಂತರದ ವೇಳೆಗೇ 3 ಗೋಲುಗಳನ್ನು ಬಿಟ್ಟುಕೊಟ್ಟಿತ್ತು. 4 ಗೋಲುಗಳಿಂದ ಆಸ್ಟ್ರೇಲಿಯಾ ಜಯ ದಾಖಲಿಸಿತ್ತು.

ಮೊದಲ 45 ನಿಮಿಷಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ಭಾರತದ ರಕ್ಷಣಾ ಆಟಗಾರರ ವಿರುದ್ಧ ಆಸ್ಟ್ರೇಲಿಯಾ ಪಂದ್ಯವಿಡೀ ಪ್ರಾಬಲ್ಯ ಮೆರೆದರೂ, ಭಾರತೀಯ ಆಟಗಾರರು ಎರಡು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟರು.

16ನೇ ನಿಮಿಷದಲ್ಲಿ ಭಾರತ ಗೋಲು ಗಳಿಸುವ ಅವಕಾಶ ಪಡೆಯಿತು. ಸುನೀಲ್ ಚೇಟ್ರಿ ಫ್ರೀ ಹೆಡ‌ರ್ ಅನ್ನು ಗುರಿಯತ್ತ ಹೊಡೆದರೂ, ಆಸೀಸ್ ಕೀಪರ್ ಮ್ಯಾಟ್ ರ್ಯಾನ್ ಇದನ್ನು ತಡೆಯುವಲ್ಲಿ ಯಶಸ್ವಿಯಾದರು. ಆದರೆ ದ್ವಿತೀಯಾರ್ಧದಲ್ಲಿ ಭಾರತ ತಂಡದ ನಾಯಕ ಗುರುಪ್ರೀತ್ ಸಿಂಗ್ ಸಂಧು ಮಾಡಿದ ತಪ್ಪು ಜಾಕ್ಸನ್ ಇರ್ವಿನ್ ಮೊದಲ ಗೋಲು ಹೊಡೆಯಲು ಅವಕಾಶ ಮಾಡಿಕೊಟ್ಟಿತು.

ಬಳಿಕ ಜೋರ್ಡನ್ ಬಾಸ್ 73ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿ, ಪಂದ್ಯವನ್ನು ಗೆದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!