Mysore
29
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಬಿಳಿಗಿರಿರಂಗನಬೆಟ್ಟದಲ್ಲಿ ಇನ್ಮುಂದೆ ವಾಹನಗಳಿಗೆ ಹಸಿರು ಸುಂಕ

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ವಾಹನ ಸವಾರರಿಂದ ಹಸಿರು ಸುಂಕ ಸಂಗ್ರಹಿಸಲು ಅರಣ್ಯ ಇಲಾಖೆ ಆರಂಭಿಸಲಾಗಿದ್ದು, 2024ರ ಜನವರಿ.1 ರಂದು ಹಸಿರು ಸುಂಕ ಸಂಗ್ರಹಿಸಲಾಗುತ್ತಿದ್ದು, ದ್ವಿಚಕ್ರವಾಹನಹಳಿಗೆ 10, ನಾಲ್ಕು ಚಕ್ರದ ವಾಹನಗಳಿಗೆ 20 ನಿಗದಿ ಪಡಿಸಲಾಗಿದೆ.

ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಒಳಗಡೆ ನೆಲೆಸಿರುವವರಿಗೆ ಸುಂಕದಿಂದ ವಿನಾಯಿತಿ ಇದೆ. ಕೆಎಸ್‌ಆರ್‌ಟಿಸಿ ಬಸ್, ಅಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳಿಗೂ ವಿನಾಯಿತಿ ನೀಡಲಾಗಿದೆ.

‘ಪ್ರಾಯೋಗಿಕವಾಗಿ ಸುಂಕವನ್ನು ಸಂಗ್ರಹಿಸಲಾಗುತ್ತಿದ್ದು, ಹಣವನ್ನು ಅರಣ್ಯ ಸಂರಕ್ಷಣೆ ಹಾಗೂ ಸಂರಕ್ಷಿತ ವ್ಯಾಪ್ತಿಯ ಗಿರಿಜನರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳಿಗೆ ಬಳಸಲಾಗುವುದು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ನಿರ್ದೇಶಕಿ ಹಾಗೂ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್ ತಿಳಿಸಿದ್ದಾರೆ.

ಯಳಂದೂರು ಮತ್ತು ಚಾಮರಾಜನಗರ ಮಾರ್ಗವಾಗಿ ಬೆಟ್ಟಕ್ಕೆ ಹೋಗಬಹುದಾಗಿದ್ದು, ಯಳಂದೂರು ಮಾರ್ಗದಲ್ಲಿ ಗುಂಬಳ್ಳಿಯಲ್ಲಿ ಮತ್ತು ಚಾಮರಾಜನಗರ ಮಾರ್ಗದಲ್ಲಿ ಹೊಂಡರಬಾಳುವಿನಲ್ಲಿ ಚೆಕ್‌ಪೋಸ್ಟ್‌ಗಳಿವೆ. ಅರಣ್ಯ ಪ್ರವೇಶಿಸುವುದಕ್ಕೂ ಮೊದಲು ಜನರು ತಮ್ಮ ವಿವರಗಳನ್ನು ದಾಖಲು ಮಾಡುವ ವ್ಯವಸ್ಥೆ ಈ ಹಿಂದೆಯೇ ಜಾರಿಯಲ್ಲಿತ್ತು. ಈಗ ಹಸಿರು ಶುಲ್ಕವನ್ನೂ ಪಡೆಯಲಾಗುವುದು.

ಬಂಡೀಪುರ ನಾಗರಹೊಳೆಗೆ ಹೋಲಿಸಿದರೆ ಬಿಆರ್‌ಟಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸಂಗ್ರಹವಾಗುವ ಆದಾಯ ಕಡಿಮೆ. ಹಸಿರು ಸುಂಕ ಸಂಗ್ರಹಿಸಿದರೆ ಅಗತ್ಯವಿದ್ದಷ್ಟು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸುವುದರ ಜೊತೆಗೆ ಇಲಾಖೆಯ ಇನ್ನಿತರ ವೆಚ್ಚ ಭರಿಸಲು ಸಹಕಾರಿಯಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!