Mysore
25
broken clouds

Social Media

ಗುರುವಾರ, 08 ಜನವರಿ 2026
Light
Dark

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸ್ಥಳಾಂತರ!

ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI)  ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿವಾಸದಿಂದ ತನ್ನ ಕಚೇರಿಯನ್ನ ಸ್ಥಳಾಂತರಿಸಿದೆ.

“ಬ್ರಿಜ್ ಭೂಷಣ್ ಅವರ ಆವರಣವನ್ನು ಖಾಲಿ ಮಾಡಿದ ನಂತರ WFI ನವದೆಹಲಿಯ ಹೊಸ ವಿಳಾಸದಿಂದ ಕಾರ್ಯನಿರ್ವಹಿಸಲಿದೆ” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಇನ್ನು ಹೊಸ WFI ಕಚೇರಿ ನವದೆಹಲಿಯ ಹರಿ ನಗರ ಪ್ರದೇಶದಲ್ಲಿದೆ. ಅಧ್ಯಕ್ಷ ಸಂಜಯ್ ಸಿಂಗ್ ಅವರು ಮುಖ್ಯಸ್ಥರಾಗಿ ಆಯ್ಕೆಯಾದ ಮೂರು ದಿನಗಳ ನಂತರ ಡಿಸೆಂಬರ್ 24 ರಂದು ಹೊಸದಾಗಿ ರಚಿಸಲಾದ ಡಬ್ಲ್ಯುಎಫ್‌ಐ ಸಮಿತಿಯನ್ನ ಅಮಾನತುಗೊಳಿಸುವಾಗ, ಸಚಿವಾಲಯವು ಬ್ರಿಜ್ ಭೂಷಣ್ ಅವರ ನಿವಾಸದಿಂದ ಕಾರ್ಯನಿರ್ವಹಿಸುತ್ತಿರುವ ಕಚೇರಿಯನ್ನ ಕಠಿಣ ಕ್ರಮ ತೆಗೆದುಕೊಳ್ಳಲು ಒಂದು ಕಾರಣವೆಂದು ಉಲ್ಲೇಖಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!