Mysore
27
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಕೊವಿಡ್‌ ನಡುವೆಯೇ ವೈರಲ್‌ ಫೀವರ್‌ ಆತಂಕ; ಒಂದೇ ಶಾಲೆಯ 15 ಮಕ್ಕಳು ಅಸ್ವಸ್ಥ

ರಾಜ್ಯಾದ್ಯಂತ ಕೊವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವೈರಲ್‌ ಫೀವರ್‌ ಭೀತಿಯೂ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರಿನ ಬಳೇಪೇಟೆಯ ಸರ್ಕಾರಿ ಶಾಲೆಯ 15 ಮಕ್ಕಳು ವೈರಲ್‌ ಫೀವರ್‌ ಕಾರಣದಿಂದ ಗೈರಾಗಿದ್ದಾರೆ.

ಒಂದೇ ಶಾಲೆಯ ಇಷ್ಟು ಪ್ರಮಾಣದ ಮಕ್ಕಳು ಒಂದೇ ದಿನ ಒಂದೇ ಕಾರಣ ನೀಡಿ ಗೈರಾಗಿರುವುದು ಆತಂಕ ಮೂಡಿಸಿದೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಎಲ್ಲಾ ಮಕ್ಕಳಲ್ಲಿದೆ ಎನ್ನಲಾಗಿದೆ. ಶಾಲೆಯಲ್ಲಿ ಒಟ್ಟು 61 ಮಕ್ಕಳ ದಾಖಲಾತಿ ಇದ್ದು, ಇದೀಗ ಆ ಮಕ್ಕಳಲ್ಲಿಯೂ ಸಹ ಆತಂಕ ಮನೆ ಮಾಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!