Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್‌

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯ ಘಟಕದ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ತಮಗೆ ಬೇಕಾದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೆಜೆಪಿ-೨ ರಚನೆ ಮಾಡಿದ್ದಾರೆ ಎಂದು ಯತ್ನಾಳ್‌ ಕಿಡಿಕಾರಿದ್ದಾರೆ.

ಈ ಹಿಂದೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಕೆಜೆಪಿ ಭಾಗ-೧ ಪಕ್ಷ ಕಟ್ಟಿದ್ದರು, ಇದೀಗ ಅವರ ಮಗ ಬಿವೈ ವಿಜಯೇಂದ್ರ ಕೆಜೆಪಿ ಭಾಗ-೨ ರನ್ನು ಕಟ್ಟಿದ್ದು, ಇದರ ಆಯುಷ್ಯ ಕೇವಲ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಮಾತ್ರ ಎಂದಿದ್ದಾರೆ.

ಲೋಕ ಸಭಾ ಚುನಾವಣೆಯಲ್ಲಿ ಎಲ್ಲಾ ೨೮ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಒಂದೇ ಒಂದಯ ಸ್ಥಾನ ಕಡಿಮೆಯಾದರು ಅವರ ಸ್ಥಾನ ತೆರವು ನಿಶ್ಚಿತ ಎಂದರು.

ರಾಜಕೀಯದಲ್ಲಿ ಸದ್ಯ ಕಳ್ಳರು, ಲಫಂಗರು ಹೆಚ್ಚಾಗಿದ್ದಾರೆ, ಮೌಲ್ಯಾಧಾರಿತ ರಾಜಕಾರಣ ಇಲ್ಲವಾಗಿದೆ. ಪಕ್ಷ ವರಿಷ್ಠರು ಕೀಲಿಯನ್ನು ಕಳ್ಳರ ಕೈಗೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ೨೮ ಸ್ಥಾನ ಬರದೇ ಹೋದರೆ ಕೀಲಿಯನ್ನು ಕಸಿದುಕೊಳ್ಳುತ್ತಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಮೇಜರ್‌ ಸರ್ಜರಿ ಆಗದಿದ್ದರೆ, ಮುಂದಿನ ಕ್ರಮ ನಾನು ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ