Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಂಜನಗೂಡು: ಕೊಟ್ಟಿಗೆಗೆ ನುಗ್ಗಿ ಕರು ಹೊತ್ತೊಯ್ದ ಹುಲಿ; ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗುಂಡ್ಲ ಎಂಬ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವನ್ನು ಹುಲಿ ಎಳೆದೊಯ್ದಿದೆ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಚಿರತೆ ಹಾಗೂ ಹುಲಿ ದಾಳಿ ಮತ್ತು ಓಡಾಡಿದ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದ್ದು, ಈ ದೃಶ್ಯ ಇದೀಗ ಸ್ಥಳೀಯರಲ್ಲಿದ್ದ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

 

ಇಂದು ( ಡಿಸೆಂಬರ್‌ 15 ) ಬೆಳಗ್ಗೆ 4.45ರ ಸಮಯದಲ್ಲಿ ಹುಲಿ ಗ್ರಾಮದ ಪಟೇಲ್‌ ಮಹಾದೇವಪ್ಪ ಎನ್ನುವವರ ಕೊಟ್ಟಿಗೆಯಿಂದ ಕುರಿಯನ್ನು ಎಳೆದೊಯ್ಯುತ್ತಿರವ ದೃಶ್ಯ ಮಾಸ್ತಮ್ಮ ದೇವಾಲಯದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ