ನವದೆಹಲಿ: ಎರಡು ದಿನಗಳ ಹಿಂದೆ ಸಂಸತ್ ಕಲಾಪದ ವೇಳೆ ಗ್ಯಾಲರಿಗೆ ನುಗ್ಗಿದ್ದಲ್ಲದೇ ಕಲರ್ ಗ್ಯಾಸ್ ಸಿಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಆರೋಪಿಗಳನ್ನು ಬಂಧಿಸಿಲಾಗಿದೆ. ಇವರಲ್ಲಿ ಸಾಗರ್ ಶರ್ಮ ಎಂಬಾತನ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಮನೆಯನ್ನು ಶೋಧಿಸಿದ ಪೊಲೀಸರಿಗೆ ಆತನ ಪರ್ಸನಲ್ ಡೈರಿ ಸಿಕ್ಕಿದೆ. ಈ ಡೈರಿಯಲ್ಲಿ 30ಮಂದಿಯ ಹೆಸರು ಹಾಗೂ ಫೋನ್ ನಂಬರ್ ಪತ್ತೆಯಾಗಿದೆ.
ಸದ್ಯ ಆ ಡೈರಿಯಲ್ಲಿ ಸಿಕ್ಕಿರುವ ಹೆಸರು ಹಾಗೂ ಫೋನ್ ನಂಬರ್‌ಗಳನ್ನು ಹಿಡಿದು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ನಾನು ದೇಶಕ್ಕಾಗಿ ದುಡಿಯುತ್ತಿದ್ದೇನೆ: ಪೊಲೀಸರಿಗೆ ಸಿಕ್ಕಿರುವ ಸಾಗರ್ ಡೈರಿಯಲ್ಲಿ ಒಂದಿಷ್ಟು ಟಿಪ್ಪಣಿಗಳು ಕಂಡುಬಂದಿದೆ. ಅವುಗಳಲ್ಲಿ ನಾನು ದೇಶಕ್ಕಾಗಿ ಪ್ರಾಮಾಣಿಕಾವಾಗಿ ದುಡಿಯುತ್ತಿದ್ದೇನೆ. ನನ್ನ ಜೊತೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರು ಬೇಕು ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೇ ದೇಶಕ್ಕೆ ಸಂಬಂಧಪಟ್ಟಂತೆ ಅನೇಕ ಟಿಪ್ಪಣಿಗಳು, ದೇಶಪ್ರೇಮ ಗೀತೆಗಳು, ಕವನಗಳು ಬರೆದರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.