ಹುಲಿಗಳ ನಾಡು ಎಂದೇ ಖ್ಯಾತಿಯನ್ನು ಪಡೆದಿರುವ ಚಾಮರಾಜನಗರದಲ್ಲಿ ಹುಲಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ದನ ಕರು, ಕುರಿಗಳಿಗೆ ಮೇವು ತರಲು ತೆರಳಿದ್ದ 50 ವರ್ಷದ ವ್ಯಕ್ತಿಯನ್ನು ದಾಳಿ ನಡೆಸಿ ಎಳೆದೊಯ್ದಿರುವ ಹುಲಿ ತಿಂದುಹಾಕಿದೆ.
ಗುಂಡ್ಲುಪೇಟೆಯ ಹಾಡಿನಕಣಿವೆ ಎಂಬಲ್ಲಿ ಈ ಘಟನೆ ನಿನ್ನೆ ( ಡಿಸೆಂಬರ್ 11 ) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 50 ವರ್ಷದ ಬಸಪ್ಪ ಎಂಬುವವರನ್ನು ಎಳೆದೊಯ್ದ ಹುಲಿ ಮೃತದೇಹವನ್ನು ತಿಂದುಹಾಕಿದ್ದು, ಕಾಡಿನ ಮಧ್ಯೆ ದೇಹ ದೊರಕಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ವ್ಯಾಘ್ರನ ಸೆರೆ ಹಿಡಿಯಲು ಯೋಜನೆ ರೂಪಿಸುತ್ತಿದ್ದಾರೆ. ಹುಲಿ ದಾಳಿ ಸುದ್ದಿ ಇದೀಗ ಗ್ರಾಮಸ್ಥರ ನಿದ್ದೆಗೆಡಿಸಿದೆ.





