Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಟ್ರಕ್‌ಗಳಿಗೆ ಎಸಿ ಕ್ಯಾಬಿನ್‌ ಅಳವಡಿಕೆ ಖಡ್ಡಾಯ: ಕೇಂದ್ರ ರಸ್ತೆ ಸಚಿವಾಲಯ ಆದೇಶ

ನವದೆಹಲಿ : ಟ್ರಕ್‌ ಚಾಲಕರ ಹಿತದೃಷ್ಠಿಯಿಂದ 2025ರ ಅಕ್ಟೋಬರ್‌ನಿಂದ ತಯಾರಾಗುವ ಹೊಸ ಟ್ರಕ್‌ಗಳಿಗೆ ಎಸಿ ಅಳವಡಿಕೆ ಖಡ್ಡಾಯ ಎಂದು ಕೇಂದ್ರ ಸಚಿವಾಲಯ ಹಾಗೂ ಹೆದ್ದಾರಿಗಳ ಸಚಿವಾಲಯ ಆದೇಶ ಹೊರಡಿಸಿದೆ.

ಈ ಹಿಂದೆ ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಡ್ಕರಿ, ಟ್ರಕ್‌ ಕ್ಯಾಬಿನ್‌ಗಳಲ್ಲಿ ಎಸಿ ಅಳವಡಿಸುವುದು ಕಡ್ಡಾಯಗೊಳಿಸುವ ಕರಡು ಪ್ರತಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು.

ಅದರಂತೆ ಸರ್ಕಾರದ ಹೊಸ ಸೂಚನೆಯ ಅನುಸಾರ, ಅಕ್ಟೋಬರ್‌ 1-೨೦೨೫ರ ನಂತರ ನಿರ್ಮಾಣವಾಗುವ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ ಅಳವಡಿಕೆ ಕಡ್ಡಾಯವಾಗಿದೆ.

ಅದರಲ್ಲೂ ಎನ್‌2, ಎನ್‌3, ಮಾದರಿಯ 3.5ಟನ್‌ ಭಾರ ಮೀರಿದ 12ಟನ್‌ಹಿಂತಲೂ ಹೆಚ್ಚಿಲ್ಲದ ಸರಕು ಸಾಗಾಣೆ ವಾಹನಗಳಿಗೆ ಎಸಿ ಕ್ಯಾಬಿನ್‌ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ