Mysore
28
scattered clouds

Social Media

ಬುಧವಾರ, 14 ಜನವರಿ 2026
Light
Dark

ಬಿಜೆಪಿಗೆ ಬಿಜೆಪಿಯವರೇ ಇಟ್ಟ ಹೆಸರು ಬಜೆಟ್‌ ಜನತಾ ಪಾರ್ಟಿ: ಕಾಂಗ್ರೆಸ್‌

ಮೈಸೂರು : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯೊಳಗಿನ ಒಳ ಜಗಳ ಮತ್ತೊಂದು ಹಂತಕ್ಕೆ ತಿರುವು ಪಡೆದಿದ್ದು, ತಮ್ಮದೇ ಬಿಜೆಪಿ ಪಕ್ಷದ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ಸ್ವಪಕ್ಷದ ನಾಯಕ ಅಶೋಕ್‌ ಅವರ ವಿರುದ್ಧ ಸಮಧಾನ ಹೊರಹಾಕಿದ್ದಾರೆ.

ಅಶೋಕ್‌ ವಿರುದ್ಧ ಕಿಡಿಕಾರಿದ ಎಸ್‌.ಆರ್‌. ವಿಶ್ವನಾಥ್‌ ಅಶೋಕ್‌ ಬಕೆಟ್‌ ಹಿಡಿದುಕೊಂಡೇ ರಾಜಕಾರಣ ಮಾಡುತ್ತಾರೆ ಎಂದು ದೂರಿದ್ದರು. ಈ ಸಂಬಂಧ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಬಿಜೆಪಿಯವರಿಗೆ ಬಿಜೆಪಿಯವರೇ ಕೊಟ್ಟಿರುವ ಮತ್ತೊಂದು ಹೆಸರು ಬಕೆಟ್‌ ಜನತಾ ಪಾರ್ಟಿ ಎಂದು ಕಾಲೆಳೆದಿದ್ದಾರೆ.

ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌, ಅಶೋಕ್‌ ವಿರುದ್ಧ ನೀಡಿರುವ ಹೇಳಿಕೆನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪೋಸ್ಟ್‌ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ʼ ಆರ್‌. ಅಶೋಕ್‌ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್‌ ಹಿಡಿದಿರಿ? ಯಾವ ಬ್ರಾಂಡ್‌ ಬಕೆಟ್‌ ಹಿಡಿದಿರಿ? ಯಾರಿಗೆ ಬಕೆಟ್‌ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿರಿ? ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಮತ್ತೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು, ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್‌ ಜನತಾ ಪಾರ್ಟಿ, ಬ್ಲೂ ಬಾಯ್ಸ್‌ ಜನತಾ ಪಾರ್ಟಿ, ಈಗ ಹೊಸದಾಗಿ ಬಕೆಟ್‌ ಜನತಾ ಪಾರ್ಟಿ ಸೇರ್ಪಡೆಯಾಗಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

https://x.com/INCKarnataka/status/1733376888138326455?s=20

https://x.com/INCKarnataka/status/1733364871226609998?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!