ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜಭವನದಲ್ಲಿ ರಾಜ್ಯಪಾಲ ತಮಿಳಿಸೈ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಇತ್ತೀಚಿನ ತೆಲಂಗಾಣ ಚುನಾವಣಾ ಫಲಿತಾಂಶದಲ್ಲಿ ಬಿಆರ್‌ಎಸ್ ಸೋಲು ಕಂಡಿದೆ. ಕೆಸಿಆರ್ ತಮ್ಮ ಸ್ವಂತ ವಾಹನದಲ್ಲಿ ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದರು.
ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕೆಸಿಆರ್ ಒಂದು ಸ್ಥಾನದಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿ ಸೋಲು ಅನುಭವಿಸಿದ್ದಾರೆ. ಗಜ್ವೆಲ್‌ನಲ್ಲಿ ಗೆದ್ದರೆ, ಕಾಮರೆಡ್ಡಿಯಲ್ಲಿ ಸೋತಿದ್ದರು. ಎಲ್ಲಾ ಇತ್ತೀಚಿನ ಫಲಿತಾಂಶಗಳೊಂದಿಗೆ ಬಿಆರ್ ಎಸ್ ಪಕ್ಷದ ಲೆಕ್ಕಾಚಾರ ಉಲ್ಟಾ ಆಗಿದೆ.
ತೆಲಂಗಾಣದಲ್ಲಿ ಚುನಾವಣಾ ಫಲಿತಾಂಶದ ಕುತೂಹಲ ಕೊನೆ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಇದುವರೆಗೆ 60 ಸ್ಥಾನಗಳನ್ನು ಗೆದ್ದಿದ್ದು ನಾಲ್ಕು ಸ್ಥಾನಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ. ಇನ್ನು ತೆಲಂಗಾಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರೇವಂತ್ ರೆಡ್ಡಿ ಅವರು ತೆಲಂಗಾಣದ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.